ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬೀತಾ? ಸಚಿವ ಹೇಳಿದ್ದೇನು?

ಶನಿವಾರ, 27 ಜೂನ್ 2020 (16:56 IST)
ಹೊರ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಬಂದವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬಂದರೆ, ಸಮುದಾಯಲ್ಲಿಯೂ ಕೊರೊನಾ ಹರಡುತ್ತಿದೆಯಾ? ಅನ್ನೋ ಚರ್ಚೆ ಮತ್ತೆ ಶುರುವಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನು ಸಮುದಾಯಕ್ಕೆ ತಲುಪಿಲ್ಲ. ಎರಡನೇ ಹಂತದಿಂದ ಮೂರನೇ ಹಂತಕ್ಕೆ ತಲುಪುವತ್ತ ಸಾಗಿದ್ದು, ಅದನ್ನು ನಿಯಂತ್ರಿಸಲು ಎಲ್ಲಾ ರೀತಿ ಕ್ರಮ ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಸಮುದಾಯದಲ್ಲಿ ಸೋಂಕು ಕಾಣಿಸಿಕೊಂಡಿದೆಯಾ? ಎಂಬುದನ್ನು ತಿಳಿಯಲು ರೈತರು, ಕಾರ್ಮಿಕರು, ವಲಸಿಗರು ಸೇರಿದಂತೆ 10 ವಲಯಗಳಲ್ಲಿ ರ್ಯಾಂಡಮ್ ಪರೀಕ್ಷೆ ಮಾಡಲಾಗಿದೆ. ಅವರ ವರದಿ ಪ್ರಕಾರ ಇನ್ನು ಸಮುದಾಯಕ್ಕೆ ತಲುಪಿಲ್ಲ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅತ್ತೆಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಕಿರಾತಕ ಅಳಿಯ