Publish Date: Sun, 07 Aug 2022 (10:00 IST)
Updated Date: Sun, 07 Aug 2022 (10:16 IST)
ರಾಮನಗರ: ಮಗು ಸಾವಿನಿಂದ ಮನನೊಂದಿದ್ದ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರದಲ್ಲಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಒಂದು ವರ್ಷದ ಹಿಂದೆ ಅವರ ಮಗು ತೊಟ್ಟಿಗೆ ಬಿದ್ದು ದುರಂತ ಸಾವನ್ನಪ್ಪಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಮನಸ್ತಾಪಗಳಿತ್ತು ಎನ್ನಲಾಗಿದೆ. ಇದೇ ಕಲಹದಿಂದಾಗಿ ಇಬ್ಬರೂ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.