Publish Date: Sat, 08 Jun 2019 (17:06 IST)
Updated Date: Sat, 08 Jun 2019 (17:08 IST)
ಬಹುದಿನಗಳಿಂದ ನಾಡಿನ ಜನರು ಕಾದು ಕುಳಿತಿದ್ದ ಹಾಗೂ ರೈತರು ನಿರೀಕ್ಷೆ ಮಾಡುತ್ತಿದ್ದ ಮುಂಗಾರು ಕಾಲಿಡಲು ಕ್ಷಣಗಣನೆ ಆರಂಭಗೊಂಡಿದೆ.
ನಿರೀಕ್ಷೆಯಂತೆ ಮುಂಗಾರು ಮಳೆ ಕೇರಳದ ಕರಾವಳಿ ಪ್ರದೇಶಕ್ಕೆ ಇಂದು ಅಪ್ಪಳಿಸಿದೆ. ಕರ್ನಾಟಕಕ್ಕೆ ಜೂನ್ 9ರಂದು ಪ್ರವೇಶ ಮಾಡುವ ಮುನ್ಸೂಚನೆ ನೀಡಿದೆ.
ಪ್ರತಿ ವರ್ಷದ ಸಂಪ್ರದಾಯದಂತೆ ಒಂದು ವಾರದ ಮೊದಲೇ ಮುಂಗಾರು ರಾಜ್ಯವನ್ನು ಪ್ರವೇಶ ಮಾಡಬೇಕಿತ್ತು. ಈ ಬಾರಿ ಒಂದು ವಾರ ತಡವಾಗಿದೆ. ವಿಳಂಬವಾದರೂ ಕೇರಳದಲ್ಲಿ ಮುಂಗಾರು ಬಿದ್ದಿದೆ. ಇದರೊಂದಿಗೆ ದೇಶದ ಮೊದಲು ಮುಂಗಾರು ಹಂಗಾಮು ಶುರುವಾದಂತಾಗಿದೆ.
ದೇಶದ ಹಲವು ಜಲಾಶಯಗಳ ನೀರಿನ ಮಟ್ಟ ಪ್ರಪತಾಕ್ಕೆ ಇಳಿದಿದ್ದವು. ಕೃಷಿ ಕ್ಷೇತ್ರ ಸಂಕಷ್ಟದಲ್ಲಿತ್ತು. ಈಗ ಉತ್ತಮ ಮಳೆಯ ಮುನ್ಸೂಚನೆ ಸಿಕ್ಕಿರುವುದು ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.