Publish Date: Sat, 08 Jun 2019 (16:57 IST)
Updated Date: Sat, 08 Jun 2019 (17:00 IST)
ಲೋಕಸಮರದಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬೆನ್ನಲ್ಲೇ ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಮುಂದಾಗಿದೆ. ಅದರ ಅಂಗವಾಗಿ ತನ್ನ ಎಲ್ಲ ಘಟಕಗಳನ್ನು ಬಲಿಷ್ಠಗೊಳಿಸುತ್ತಿದೆ.
ಚುನಾವಣೆ ವೇಳೆ ಆ್ಯಕ್ಟೀವ್ ಆಗಿರಲಿಲ್ಲವೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಬಲವರ್ಧನೆಗೆ ದಿನೇಶ್ ಗುಂಡೂರಾವ್ ಒತ್ತು ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋಲಿನ ಹಿನ್ನೆಲೆಯಲ್ಲಿ ಒಂದೊಂದೇ ವಿಭಾಗದ ಪದಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಇದೀಗ ಸೋಶಿಯಲ್ ಮೀಡಿಯಾ ಪದಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. 100 ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗಿಯಾಗಿದ್ದರು. ಸೋಶಿಯಲ್ ಮೀಡಿಯಾ ಬಲಗೊಳಿಸುವ ಪ್ರಯತ್ನದ ಭಾಗವಾಗಿ ಸಭೆ ನಡೆದಿದ್ದು, ಸದಸ್ಯರಿಗೆ ಸಲಹೆ, ಸೂಚನೆ ಕೊಡಲಾಯಿತು.