ಉ.ಕ. ದಲ್ಲಿ ಆಸ್ಪತ್ರೆಗಾಗಿ ವಿದ್ಯಾರ್ಥಿಗಳಿಂದ ಅಭಿಯಾನ; ಟ್ವೀಟರ್ ಖಾತೆ ಬ್ಲಾಕ್ ಮಾಡಿದ ಸಂಸದ

ಶನಿವಾರ, 8 ಜೂನ್ 2019 (11:57 IST)
ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದು, ಇದಕ್ಕೆ ಹೆದರಿ ಸಂಸದ ಅನಂತ್ ಕುಮಾರ್ ಹೆಗಡೆ ಟ್ವೀಟರ್ ಖಾತೆ ಬ್ಲಾಕ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ಆಸ್ಪತ್ರೆಗೆ ಬೇಡಿಕೆಯಿಟ್ಟು ಶಾಸಕ, ಸಂಸದ, ಪ್ರಧಾನಿಗೂ ಸಂದೇಶ ರವಾನೆ ಮಾಡಿದ್ದಾರೆ,  ಅಭಿಯಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಜನರ ಕೂಡ ಬೆಂಬಲ ನೀಡಿದ್ದಾರೆ. ಅಲ್ಲದೇ ಸಚಿವ ದೇಶಪಾಂಡೆ, ಸಂಸದ ಅನಂತ್ ಕುಮಾರ್ ಹೆಗಡೆ ಜನಪ್ರತಿನಿಧಿಗಳಿಗೆ ಆಸ್ಪತ್ರೆಗೆ ಬೇಡಿಕೆಯಿಟ್ಟು ಅಭಿಯಾನ ಶುರುಮಾಡಿದ್ದಾರೆ.


ಆದರೆ ಈ  ಅಭಿಯಾನಕ್ಕೆ ಹೆದರಿದ ಸಂಸದ ಅನಂತ್ ಕುಮಾರ್ ಹೆಗಡೆ  ತಮ್ಮ ಟ್ವೀಟರ್ ಖಾತೆ ಬ್ಲಾಕ್ ಮಾಡಿದ್ದು, ಆಸ್ಪತ್ರೆ ಕೇಳಿದ್ರೆ ಟ್ವೀಟರ್ ಖಾತೆ ಬ್ಲಾಕ್ ಮಾಡುತ್ತಾರೆಂದು ಸಾರ್ವಜನಿಕರು  ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸದ್ದಾರೆ. ಈ ಹಿನ್ನಲೆ ಸಂಸದ ಅನಂತ್ ಕುಮಾರ್ ಹೆಗಡೆ  ಮತ್ತೆ ಅಕೌಂಟ್ ರೀ ಓಪನ್ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶುದ್ಧ ಕುಡಿಯುವ ನೀರಿನ ದರ ಹೆಚ್ಚಳ ವಿರೋಧಿಸಿ ಸಿಎಂಗೆ ಪತ್ರ ಬರೆದ ಹೆಚ್.ಕೆ.ಪಾಟೀಲ್