Select Your Language

Notifications

webdunia
webdunia
webdunia
webdunia

ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ಪೋಸ್ಟರ್ ಹಾಕಿ ಫಜೀತಿಗೆ ಸಿಲುಕಿದ ಡ್ಯುರೆಕ್ಸ್​ ಸಂಸ್ಥೆ

ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ಪೋಸ್ಟರ್ ಹಾಕಿ ಫಜೀತಿಗೆ ಸಿಲುಕಿದ ಡ್ಯುರೆಕ್ಸ್​ ಸಂಸ್ಥೆ
ನವದೆಹಲಿ , ಶುಕ್ರವಾರ, 7 ಜೂನ್ 2019 (08:01 IST)
ನವದೆಹಲಿ : ಡ್ಯುರೆಕ್ಸ್ ಕಾಂಡಂಮ್ ಕಂಪೆನಿ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಪೋಸ್ಟರ್ ವೊಂದನ್ನು ಹಾಕಿ ಇದೀಗ ವಿವಾದಕ್ಕೆ ಸಿಕ್ಕಿಕೊಂಡಿದೆ.




ಡ್ಯುರೆಕ್ಸ್​ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ, “ಶೇ. 70 ಭಾರತೀಯ ಮಹಿಳೆಯರು ಸೆಕ್ಸ್​ ಮಾಡುವ ವೇಳೆ ಪರಾಕಾಷ್ಠೆ ತಲುಪುವುದಿಲ್ಲ” ಎಂದು ಪೋಸ್ಟರ್ ನ್ನು ಹಂಚಿಕೊಂಡಿತ್ತು. ಅಷ್ಟೇ ಅಲ್ಲದೇ ‘ಭಾರತ, ನಾವು ಈ ಬಗ್ಗೆ ಮಾತನಾಡಬೇಕು’ ಎನ್ನುವ ಕ್ಯಾಪ್ಶನ್​ ನೀಡಿತ್ತು. ಇದು  ಭಾರತೀಯ ಪುರುಷರ ಕೆಂಗಣ್ಣಿಗೆ ಗುರಿಯಾಗಿದ್ದು, #BoycottDurex ಎನ್ನುವ ಹ್ಯಾಶ್​ ಟ್ಯಾಗ್​ ಹಾಕಿ ಅನೇಕರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.


ಇದು ನಮ್ಮ ಸಾಮರ್ಥ್ಯದ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದಂತಿದೆ ಎಂದು ಅನೇಕರು ಬರೆದುಕೊಂಡಿದ್ದರೆ, ಇನ್ನು ಕೆಲವರು ಈ ರೀತಿ ಅವಮಾನ ಮಾಡಿದ ಸಂಸ್ಥೆಯನ್ನು ಭಾರತದಿಂದಲೇ ಹೊರಗಟ್ಟಬೇಕು ಎಂದಿದ್ದಾರೆ. ಡ್ಯುರೆಕ್ಸ್​ ಜಾಹೀರಾತು ಅನೇಕ ಮಹಿಳಾ ಮಣಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಅವರು ಕೂಡ ಪುರುಷರ ಬೆಂಬಲಕ್ಕೆ ನಿಂತಿದ್ದು, ಡ್ಯುರೆಕ್ಸ್​ ನೀಡಿರುವ ಹೇಳಿಕೆ ಶುದ್ಧ ಸುಳ್ಳು ಎಂದು ಬರೆದುಕೊಂಡಿದ್ದಾರೆ.


ಅಷ್ಟೇ ಅಲ್ಲದೇ ಈ ಬಗ್ಗೆ ವಿದೇಶಿಗರು ಟ್ರೋಲ್​ ಮಾಡಿದ್ದು, ಸೆಕ್ಸ್​ ಮಾಡುವುದನ್ನೇ ಬಿಟ್ಟು ಬಿಡಿ, ಡ್ಯುರೆಕ್ಸ್​​ ಅನ್ನು ಹೊರಗಟ್ಟಿ’ ಎಂದು ಭಾರತೀಯರನ್ನು ಲೇವಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಟಿಜಿಎಸ್ ಹಾಗೂ ನೆಪ್ಟ್ ಮೇಲಿನ ಶುಲ್ಕವನ್ನು ರದ್ದು ಮಾಡಿದ ಆರ್.ಬಿ.ಐ.