Select Your Language

Notifications

webdunia
webdunia
webdunia
webdunia

ಆರ್ಟಿಜಿಎಸ್ ಹಾಗೂ ನೆಪ್ಟ್ ಮೇಲಿನ ಶುಲ್ಕವನ್ನು ರದ್ದು ಮಾಡಿದ ಆರ್.ಬಿ.ಐ.

ಆರ್ಟಿಜಿಎಸ್ ಹಾಗೂ ನೆಪ್ಟ್ ಮೇಲಿನ ಶುಲ್ಕವನ್ನು ರದ್ದು ಮಾಡಿದ ಆರ್.ಬಿ.ಐ.
ನವದೆಹಲಿ , ಶುಕ್ರವಾರ, 7 ಜೂನ್ 2019 (07:58 IST)
ನವದೆಹಲಿ : ಆರ್ಟಿಜಿಎಸ್ ಹಾಗೂ ನೆಪ್ಟ್ ವ್ಯವಹಾರಗಳ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ  ವಹಿವಾಟು ಶುಲ್ಕವನ್ನು ರದ್ದುಗೊಳಿಸುವುದರ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.




ಆರ್ಟಿಜಿಎಸ್ (Real Time Gross Settlement System) ಒಂದು ಹಣ ವರ್ಗಾವಣೆ ಮಾಧ್ಯಮವಾಗಿದ್ದು, ದೊಡ್ಡ ಮೊತ್ತದ ಹಣವನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಇದರ ಮೂಲಕ ಕನಿಷ್ಠ ರೂ. 2 ಲಕ್ಷ ವರ್ಗಾವಣೆ ಮಾಡಬಹುದು. ಭಾನುವಾರ ಹಾಗೂ ರಜಾ ದಿನಗಳಲ್ಲಿ ಆರ್.ಟಿ.ಜಿ.ಎಸ್. ಲಭ್ಯವಿರುವುದಿಲ್ಲ . ಆನ್ಲೈನ್ ಹಾಗೂ ಬ್ಯಾಂಕ್ ಶಾಖೆ ಮೂಲಕ ಇದರ ಬಳಕೆ ಮಾಡಬಹುದು.ಇದಕ್ಕೆ ಬ್ಯಾಂಕುಗಳು ಶುಲ್ಕ ವಿಧಿಸುತ್ತಿದ್ದವು. ಎಸ್.ಬಿ.ಐ. ಬ್ಯಾಂಕ್ ನಲ್ಲಿ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯೊಳಗೆ 2 ಲಕ್ಷದಿಂದ 5 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ರೆ 25 ರೂಪಾಯಿ ಶುಲ್ಕ ವಸೂಲಿ ಮಾಡುತ್ತಿತ್ತು. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ 51 ರೂಪಾಯಿ ಶುಲ್ಕ ನೀಡಬೇಕಾಗಿತ್ತು.


ಹಾಗೇ ನೆಫ್ಟ್ ( National Electronic Funds Transfer ) ಮಾಧ್ಯಮದ ಮೂಲಕವೂ ಆನ್ಲೈನ್ ಹಾಗೂ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಬಹುದು. ಇದು ವರ್ಗಾವಣೆ ಮಾಡಿದ ತಕ್ಷಣ ತಲುಪುವುದಿಲ್ಲ. ವರ್ಗಾವಣೆ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಎಸ್ಬಿಐ ಗ್ರಾಹಕರು ನೆಫ್ಟ್ ಮೂಲಕ ರೂ. 10,000 ವರ್ಗಾವಣೆ ಮಾಡಿದರೆ ರೂ. 50 ಶುಲ್ಕ ಪಾವತಿ ಮಾಡಬೇಕಾಗಿತ್ತು. ರು. 1 ಲಕ್ಷಕ್ಕೆ 5 ರೂಪಾಯಿ, 1 ರಿಂದ 2 ಲಕ್ಷಕ್ಕೆ 15 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಈಗ ಆರ್.ಬಿ.ಐ. ಆರ್ಟಿಜಿಎಸ್ ಹಾಗೂ ನೆಪ್ಟ್ ವ್ಯವಹಾರಗಳ ಮೇಲೆ ವಿಧಿಸಲಾದ ಶುಲ್ಕವನ್ನು ರದ್ದುಗೊಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಶ್ಚಟ ವ್ಯಸನಿಗಳು ಆತನಿಗೆ ಮಾಡಿದ್ದು ಕೇಳಿದ್ರೆ ಕಣ್ಣೀರು ಬರುತ್ತೆ…