Publish Date: Thu, 06 Jun 2019 (18:50 IST)
Updated Date: Thu, 06 Jun 2019 (18:51 IST)
ದುಶ್ಚಟ ವ್ಯಸನಿಗಳ ತಂಡಕ್ಕೆ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ಕೋಟೆನಾಡು ಚಿತ್ರದುರ್ಗದಲ್ಲಿ ದುಶ್ಚಟ ವ್ಯಸನಿಗಳ ಕಾಟ ಹೆಚ್ಚಾಗಿದ್ದು, ಪುಂಡರ ಬ್ಲೇಡ್ ದಾಳಿಗೆ ಸಿಲುಕಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಸಲ್ಯೂಷನ್ ವ್ಯಸನಿಗಳ ಆರು ಮಂದಿ ತಂಡ ಬಡೇಮಕಾನ್ ನಿವಾಸಿ ಕರೀಂ ಎಂಬ ಯುವಕನ ಮೇಲೆ ಬ್ಲೇಡ್ ನಿಂದ ದಾಳಿಮಾಡಿದೆ.
ಮೂರು ಸಾವಿರ ರೂಪಾಯಿ ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ದುಶ್ಚಟ ವ್ಯಸನಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಕರೀಂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.