ಹಾವೇರಿ : ಕಾಂಗ್ರೆಸ್ ಇನ್ನೊಮ್ಮೆ ಇತಿಹಾಸ ಓದು ಅಂತಾ ಹೇಳಬೇಕು. ಅವರಿಗೆ ಯಾವಾಗಲೂ ಕನಸಿನಲ್ಲಿ ಜಿನ್ನಾನೆ ಕಾಣುತ್ತಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, ಮೊಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಒಂದೇ ಎಂಬ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಕಿಡಿಕಾರಿದರು.
ಜಿನ್ನಾನೆಂದರೆ ಕಾಂಗ್ರೆಸ್ನವರಿಗೆ ಬಹಳ ಪ್ರೀತಿ. ಯಾಕಂದರೆ ದೇಶವನ್ನೇ ಒಡೆದು ಆಡಳಿತಕ್ಕೆ ಬಂದವರು. ಹೀಗಾಗಿ ಇದರ ಬಗ್ಗೆ ವಿಶ್ಲೇಷಣೆ ಮಾಡುವ ಅವಶ್ಯಕತೆಯೂ ಇಲ್ಲ, ಆಶ್ಚರ್ಯವೂ ಇಲ್ಲ ಎಂದರು.
ಸರ್ಕಾರದ ಮೇಲಿನ ಪಸೆರ್ಂಟೇಜ್ ಆರೋಪವು ರಾಜಕೀಯ ಪ್ರೇರಿತವಾಗಿದೆ. ಏನಾದರೂ ದಾಖಲೆಗಳಿದ್ದರೆ ಅವರು ಕೊಡಬೇಕು.