Publish Date: Thu, 25 Aug 2022 (11:24 IST)
Updated Date: Thu, 25 Aug 2022 (11:10 IST)
ನವದೆಹಲಿ : ಕಾಂಗ್ರೆಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿರುವ ಬಗ್ಗೆ ವರದಿಯಾಗಿದೆ. ಆದರೆ ಡಿಲೀಟ್ ಆಗಿರುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ನಮ್ಮ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿದೆ. ದೋಷ ಬಗೆಹರಿಸಲು ಕ್ರಮವಹಿಸಲಾಗಿದೆ. ಗೂಗಲ್ ಹಾಗೂ ಯೂಟ್ಯೂಬ್ ತಂಡದೊಂದಿಗೆ ಕಾಂಗ್ರೆಸ್ ಸಂಪರ್ಕದಲ್ಲಿದೆ ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಟೀಮ್ ಟ್ವೀಟ್ ಮಾಡಿ ತಿಳಿಸಿದೆ.
ಯಾವ ಕಾರಣಕ್ಕೆ ಚಾನೆಲ್ ಡಿಲೀಟ್ ಆಗಿದೆ ಎಂಬುದು ಸ್ಪಷ್ಟವಾಗಿಲ್ಲ.