Publish Date: Sat, 20 Aug 2022 (12:57 IST)
Updated Date: Sat, 20 Aug 2022 (12:49 IST)
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವರಿಗೆ ಭದ್ರತೆ ಹೆಚ್ಚಿಸಿದ್ದೇವೆ. ಈ ಬಗ್ಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಧರ್ಮ ಪಶ್ಚಾತ್ತಾಪ ವಿಚಾರದಲ್ಲಿ ಸಿದ್ದು ಯೂಟರ್ನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸ್ವಾಮೀಜಿ ಮತ್ತು ಸಿದ್ದರಾಮಯ್ಯ ನಡುವೆ ನಡೆದಿರುವ ಸಂಭಾಷಣೆ ಇದ್ದಾಗಿದ್ದು, ಆ ಬಗ್ಗೆ ನಾನು ಮಾತನಾಡಲ್ಲ. ಸಿದ್ದರಾಮಯ್ಯ ನಿನ್ನೆ ಒಂದು. ಇಂದು ಒಂದು ಮಾತನಾಡಿದ್ದಾರೆ. ಸತ್ಯ ಜಗತ್ತಿಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಸಂಬಂಧ ವಿಧಾನಸೌಧದ ದೇವರಾಜ ಅರಸು ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಇಂದು ಕರ್ನಾಟಕ ಕಂಡಂತಹ ಧೀಮಂತ ನಾಯಕ, ಹಿಂದುಳಿದವರ ನಾಯಕ ದೇವರಾಜ ಅರಸ್ ಅವರು ತಮ್ಮದೇ ಆದಂತಹ ಸೇವೆಯನ್ನ ಮಾಡಿ ಜನಮನ ಗೆದ್ದಿದ್ದಾರೆ.