Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ತಿರುಗೇಟು

R. Ashok
bangalore , ಬುಧವಾರ, 17 ಆಗಸ್ಟ್ 2022 (21:54 IST)
ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಕನ್ಪೂಷನ್‌ನಲ್ಲಿದ್ದಾರೆ. ಮುಸ್ಲಿಂ ಏರಿಯಾ ಏನು ಪಾಕಿಸ್ತಾನಕ್ಕೆ ಸೇರಿದ್ಯಾ ಅಥವಾ ಭಾರತಕ್ಕೆ ಸೇರಿದ್ಯಾ, ಮುಸ್ಲಿಂನವರು ಇರೋ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಅಂದುಕೊಂಡಿದ್ದಾರಾ ಸಿದ್ದರಾಮಯ್ಯ ಎಂದು ತರಾಟೆಗೆ ತಂಗೊಡ್ರು. ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು, ಅಂಡಮಾನ್ ಜೈಲಿನಲ್ಲಿದ್ದವರು ಯಾರು ಬದುಕಿ ಬಂದಿಲ್ಲ. ಅಂತಹ ಶಿಕ್ಷೆಯನ್ನು ಸಾವರ್ಕರ್​ಗೆ ಯಾಕೆ ನೀಡಬೇಕಿತ್ತು, ಇವರ ಲೀಡರ್‌ಗಳಿಗೆ ಅಂತ ಶಿಕ್ಷೆ ಯಾಕೆ ಕೊಟ್ಟಿಲ್ಲ, ಬ್ರಿಟಿಷರ ಜೊತೆ ಹೋರಾಡಿದ ಸಾವರ್ಕರ್ ಫೋಟೊ ಹಾಕೋಕೆ ಇವರನ್ನ ಯಾಕೆ ಕೇಳಬೇಕು, ಯಾವ ಯಾವ ಧರ್ಮದವರು ಇದ್ದಾರೆ ಅಂತ ಇವ್ರನ್ನ ಕೇಳಿ ಹಾಕಬೇಕಾ, ಯಾವ ಧರ್ಮ,ಜಾತಿ ಇದ್ದಾರೆ ಅಂತ ನೋಡಿ ಫೋಟೊ ಹಾಕೋಕೆ ಸಂವಿಧಾನದ ಅಡಿ ನಿಯಮ ಇದ್ಯಾ, ಸಾವರ್ಕರ್ ಅವ್ರನ್ನ ಅವ್ರು ಒಪ್ಪದೇ ಇರಬಹುದು ಆದ್ರೆ ನಾವು ದೇಶಭಕ್ತರು ಸಾವರ್ಕರ್ ಅವರನ್ನು ಒಪ್ಪುತ್ತೇವೆ ಎಂದು ಆರ್.ಅಶೋಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಲ್ಮಿ ಸ್ಟೈಲ್​ನಲ್ಲಿ ಕೊಲೆ, ಪತಿ ಅಂದರ್..!