Publish Date: Sun, 26 Mar 2023 (07:22 IST)
Updated Date: Sat, 25 Mar 2023 (22:24 IST)
ದಾವಣಗೆರೆ : ಕರ್ನಾಟಕಕ್ಕೆ ಬಹುಮತ ಪಡೆದ ಬಿಜೆಪಿ ಸರ್ಕಾರದ ಅವಶ್ಯಕತೆಯಿದೆ. ನಿಮ್ಮ ಸೇವೆ ಮಾಡಲು ಬಿಜೆಪಿ ಸರ್ಕಾರವನ್ನ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ದಾವಣಗೆರೆಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಸೇವೆ ಮಾಡಬೇಕೆಂದು ಬಯಸುತ್ತಿದ್ದೇನೆ. ಆದರೆ ಕಾಂಗ್ರೆಸ್ ನನ್ನ ಸಮಾಧಿ ಬಯಸುತ್ತಿದೆ. ಜನರು ಮೋದಿ ನಿನ್ನ ಕಮಲ ಅರಳುತ್ತೆ ಅಂತಿದ್ದಾರೆ ಎಂದು ತಿರುಗೇಟು ನೀಡಿದರು.
ದಾವಣಗೆರೆಯಲ್ಲಿ 4 ವಿಜಯ ಸಂಕಲ್ಪಯಾತ್ರೆಗಳ ಮಹಾಸಂಗಮ ಯಶಸ್ವಿಯಾಗಿದೆ. ಸಾಕಷ್ಟು ಜನಬೆಂಬಲ ಸಿಕ್ಕಿದೆ. ಮುಂದಿನ 3 ತಿಂಗಳೂ ಹುರುಪು ಹೀಗೆ ಇರಬೇಕು. ನಮ್ಮ ಕಾರ್ಯಕರ್ತರು ಎಲ್ಲ ಬೂತ್ಗಳಿಗೂ ತೆರಳಿ ಬಿಜೆಪಿ ಪರ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.