Publish Date: Sat, 25 Mar 2023 (07:33 IST)
Updated Date: Sat, 25 Mar 2023 (10:19 IST)
ಬೆಂಗಳೂರು : ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಪ್ರವಾಸದಲ್ಲಿದ್ದು, ವೈಟ್ ಫೀಲ್ಡ್ – ಕೆ.ಆರ್.ಪುರಂ ನಡುವಿನ ವೈಟ್ಫೀಲ್ಡ್ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಚಾಲನೆ ನೀಡಲಿದ್ದಾರೆ.
ಆದ್ದರಿಂದ ವೈಟ್ಫೀಲ್ಡ್ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನ ಸಂಪೂರ್ಣ ನಿರ್ಬಂಧಿಸಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30ರ ವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ವೈಟ್ ಫೀಲ್ಡ್ ಸುತ್ತಮುತ್ತ ಸಂಚರಿಸುವವರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಎಲ್ಲೆಲ್ಲಿ ನಿರ್ಬಂಧ?
ವರ್ತೂರು ಕೋಡಿಯಿಂದ ಹೋಫ್ ಫಾರಂ ಜಂಕ್ಷನ್ ಮೂಲಕ ಕನ್ನಮಂಗಲ ಗೇಟ್ ವರೆಗೆ, ಚನ್ನಸಂದ್ರದಿಂದ ಹೋಫ್ ಫಾರಂ ಮೂಲಕ ಹೂಡಿ ಸರ್ಕಲ್ ವರೆಗೆ ಹಾಗೂ ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಅಸ್ಪತ್ರೆ ಮೂಲಕ ಹೋಫ್ ಫಾರಂ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.