Publish Date: Mon, 20 Mar 2023 (09:45 IST)
Updated Date: Mon, 20 Mar 2023 (10:16 IST)
ಬೆಂಗಳೂರು : ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ಬೆಂಗಳೂರಿಗೆ ಬರಲಿದ್ದಾರೆ. ಕೆ.ಆರ್ ಪುರ – ವೈಟ್ಫೀಲ್ಡ್ ಮಾರ್ಗದ ಮೆಟ್ರೋ ಉದ್ಘಾಟಿಸಲಿರುವ ಮೋದಿ ʼಮಿಷನ್ ಬೆಂಗಳೂರು ಟಾಸ್ಕ್ʼಗೆ ಜೀವ ತುಂಬಲಿದ್ದಾರೆ.
ವೈಟ್ಫೀಲ್ಡ್ ಮೆಟ್ರೋ ಲೈನ್ಗೆ ಗ್ರೀನ್ ಸಿಗ್ನಲ್ ನೀಡಿ ಅದರಲ್ಲೇ ಸಂಚರಿಸುವ ಮೂಲಕ ಗ್ರೇಟರ್ ಬೆಂಗಳೂರು ಟಾರ್ಗೆಟ್ ಮಾಡಲಿದ್ದಾರೆ. ಬೆಂಗಳೂರು ನಗರದ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು 20ಕ್ಕೂ ಅಧಿಕ ಸ್ಥಾನವನ್ನು ಗೆಲ್ಲಬೇಕೆಂಬ ಟಾರ್ಗೆಟ್ ಹಾಕಿಕೊಂಡಿದೆ.