Select Your Language

Notifications

webdunia
webdunia
webdunia
webdunia

ರಾಜ್ಯ ಬಿಜೆಪಿ ಯಲ್ಲಿ ಮುಗಿಯದ ನಾಯಕರ ಕಿತ್ತಾಟ

The never-ending battle of leaders in the state BJP
bangalore , ಶುಕ್ರವಾರ, 17 ಮಾರ್ಚ್ 2023 (17:49 IST)
ವಿಜಯೇಂದ್ರ ಸೋಮಣ್ಣ ನಂತರ ಎಂಪಿ ಕುಮಾರಸ್ವಾಮಿ ಹಾಗೂ ಸಿಟಿ ರವಿ ನಡುವೆ ವಾರ್ ಶುರುವಾಗಿದೆ.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ದ  ಎಂಪಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ.
 
ತಮಗೆ ಟಿಕೆಟ್ ತಪ್ಪಿಸುವ ಹಾಗೂ ತಮ್ಮ ವಿರುದ್ದದ ಪ್ರತಿಭಟನೆಗೆ ಕಾರಣ ಸಿಟಿ ರವಿ ಕಾರಣ ಎಂಬ ಆರೋಪ ಮಾಡಿದ್ದು,ನಿನ್ನೆ ಕ್ಷೇತ್ರದಲ್ಲಿ ಕಾರ್ಯಕರ್ತರಿಂದ ಹೋರಾಟ ವ್ಯಕ್ತವಾದ ಬೆನ್ನೆಲ್ಲೆ ಇಂದು ಬೆಂಗಳೂರಿಗೆ ಎಂಪಿ ಕುಮಾರಸ್ವಾಮಿ ದೌಡಯಿಸಿದ್ದಾರೆ.ರಹಸ್ಯ ಸ್ಥಳದಲ್ಲಿ ಬಿಜೆಪಿ ನಾಯಕರ ಸಂಪರ್ಕಿಸಿ ದೂರು ಕೊಡುವ ಪ್ರಯತ್ನ ಮಾಡಿದ್ದಾರೆ.
 
ನಿನ್ನೆಯ ಘಟನೆ ಬಗ್ಗೆ ನಾಯಕರಿಗೆ ತಿಳಿಸಲು  ಎಂಪಿ ಕುಮಾರಸ್ವಾಮಿ ಮುಂದಾಗಿದ್ದಾರೆ.ನಿನ್ನೆ ವಿಜಯ ಸಂಕಲ್ಪ ರಥಯಾತ್ರೆಗೆ ವ್ಯಕ್ತವಾಗಿದ್ದ ಬಿಜೆಪಿ ಕಾರ್ಯಕರ್ತರ ಹೋರಾಟದ ಬಿಸಿ, ಕಾರ್ಯಕರ್ತರ ಹೋರಾಟದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ವಿಜಯ ಸಂಕಲ್ಪ ರಥಯಾತ್ರೆಯನ್ನ ಬಿಜೆಪಿ ಕಾರ್ಯಕರ್ತರ ಹೋರಾಟದಿಂದ ಅಸಮಾಧಾನ ಗೊಂಡು ಅರ್ಧದಲ್ಲಿ  ಬಿಎಸ್ ವೈ ವಾಪಸು ಬಂದಿದ್ದರು.
 
ಕಾರ್ಯಕರ್ತರ ನಡೆಯಿಂದ ಬಿಎಸ್ವೈ ಬೇಸರ ಮಾಡಿಕೊಂಡಿದ್ದು ಎಂಪಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.ಆ ನಂತರ ಇಂದು ಬೆಂಗಳೂರಿಗೆ ಬಂದಿರುವ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ನಾಯಕರ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ.ಕಳೆದ ಎಂಎಲ್ಸಿ ಚುನಾವಣೆ ಯಲ್ಲಿ ಎಂಕೆ ಪ್ರಾಣೇಶ್ ಕಡಿಮೆ ಅಂತರದ ಗೆಲುವಿಗೆ ಎಂಪಿ ಕುಮಾರಸ್ವಾಮಿ ಕಾರಣ ಎಂಬ ಆರೋಪ ಬಂದಿದ್ದುಪ್ರಾಣೇಶ್ ಸೋಲಿಸಲು ಎಂಪಿ ಕುಮಾರಸ್ವಾಮಿ ಕಾರಣ ಎಂಬ ಸಿಟ್ಟಿದೆ.ಅಲ್ಲದೇ ಜಿಲ್ಲೆಯಲ್ಲೂ ಸಿಟಿ ರವಿ ಹಾಗೂ ಕುಮಾರಸ್ವಾಮಿ ನಡುವೆ ನಡೀತ್ತಿರುವ ಅಂತರಿಕ ವಾರ್ ಆ ಸೇಡು ತೀರಿಸಿಕೊಳ್ಳಲು ಈಗ ಎಂಕೆ ಪ್ರಾಣೇಶ್ ಹಾಗೂ ಸಿಟಿ ರವಿ ಒಂದಾಗಿ ಕುಮಾರಸ್ವಾಮಿ ಗೆ ಟಿಕೆಟ್ ತಪ್ಪಿಸುವ ಕೆಲಸ ನಡೀತ್ತಿದೆ ಎಂಬ ಚರ್ಚೆ ಆಗ್ತಿದ್ದು,ಈ ಬೆಳವಣಿಗೆ ಯಿಂದ ಚಿಂತೆಗೀಡಾಗಿ ಕುಮಾರಸ್ವಾಮಿ ಯಿಂದ ಈಗ ಟಿಕೆಟ್ ಪಡೆಯಲು ಕಸರತ್ತು ನಡೆಯುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಷ್ಕರ ಹಿಂಪಡೆದ ಲಾರಿ ಮಾಲೀಕರು