Select Your Language

Notifications

webdunia
webdunia
webdunia
Wednesday, 2 April 2025
webdunia

ಮಾರ್ಚ್ 21 ರಂದು ಸಾರಿಗೆ ನೌಕರರ ಮುಷ್ಕರ

ಮಾರ್ಚ್ 21 ರಂದು ಸಾರಿಗೆ ನೌಕರರ ಮುಷ್ಕರ
bangalore , ಶುಕ್ರವಾರ, 17 ಮಾರ್ಚ್ 2023 (17:31 IST)
ಸಾರಿಗೆ ನೌಕರರು 15% ವೇತನ ಪರಿಷ್ಕರಣೆ ನಿರಾಕರಿಸಿದ ಬೆನ್ನಲ್ಲೇ ಕಾರ್ಮಿಕ ಇಲಾಖೆ ಆಯುಕ್ತ ಸಾರಿಗೆ ನೌಕರರ ಜೊತೆ ಮಾರ್ಚ್ 20 ಮಧ್ಯಾಹ್ನ 2.30 ಕ್ಕೆ ಕಾರ್ಮಿಕ ಸಂಘಗಳ ಜೊತೆ ಸಂಧಾನ ಸಭೆ ನಡೆಸಲಿದ್ದಾರೆ. ಸರ್ಕಾರದ ಆದೇಶ ಮೇರೆಗೆ ಮಾರ್ಚ್ 20 ರಂದು ಕಾರ್ಮಿಕ ಸಂಘಟನೆಗಳು ಮತ್ತು ಅಧಿಕಾರಿಗಳನ್ನ ಸಂಧಾನ ಸಭೆಗೆ ಆಮಂತ್ರಿಸಲಾಗಿದೆ. ಮಾರ್ಚ್ 21 ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದ ಹಿನ್ನೆಲೆ ನೌಕರರನ್ನ ಸಮಾಧಾನ ಪಡಿಸಲು ಮತ್ತೊಂದು ರಾಜಿ ಸಭೆಗೆ ಸರ್ಕಾರ ಮುಂದಾಗಿದೆ. ಇನ್ನು ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತಾಗಿ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್.ವಿ. ಅನಂತ ಸುಬ್ಬರಾವ್ ಖಡಕ್ ಎಚ್ಚರಿಕೆ ನೀಡಿದ್ದು,ಅದರಂತೆ ಸಾರಿಗೆ ನೌಕರರ ಸಂಘವು ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಗತಿಕ ಮಟ್ಟದಲ್ಲಿ “ಆರೋಗ್ಯಕರ ನಗರಗಳ ಪಾಲುದಾರಿಕೆ” ಪ್ರಶಸ್ತಿ ಗರಿ