Publish Date: Fri, 17 Mar 2023 (17:38 IST)
Updated Date: Fri, 17 Mar 2023 (17:42 IST)
ಬೇಡಿಕೆ ಈಡೇರಿಕೆ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್ ಸಂಘಗಳ ಒಕ್ಕೂಟವು ಪ್ರತಿಭಟನೆಯನ್ನು ವಾಪಾಸ್ ಪಡೆದಿದೆ.ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯು ಬೆಂಗಳೂರು ನಗರಕ್ಕೆ ಮಧ್ಯಮ ಮತ್ತು ಲಘು ಸರಕು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 12ಗಂಟೆಯಿಂದ ನಡೆಯಬೇಕಿದ್ದ ಮುಷ್ಕರವನ್ನು ಒಕ್ಕೂಟ ಹಿಂಪಡೆದಿದೆ. ಇನ್ನು ಮುಂದೆ ನಗರದಲ್ಲಿ ಲಘು ಮತ್ತು ಮಧ್ಯಮ ಸರಕು ಸಾಗಾಣಿಕೆ ವಾಹನಗಳು ಸಂಚರಿಸಲಿದ್ದು ,7.5 ಮೆಟ್ರಿಕ್ ಟನ್ ಲಗೇಜ್ ಹೊತ್ತ ವಾಹನಗಳ ಓಡಾಟಕ್ಕೆ ಟ್ರಾಫಿಕ್ ಕಮೀಷನರ್ ಅಸ್ತು ಎಂದಿದ್ದಾರೆ.