ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಿ ದಾರಿಯಲ್ಲಿ ಸಾಗುತ್ತಿದೆಯೇ ಎಂಬ ವಿಚಾರದ ಕುರಿತು ಮಾತನಾಡಲು ಆಹ್ವಾನಿಸಿದ ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯದ ಆಹ್ವಾನವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ತಿರಸ್ಕರಿಸಿದ್ದಾರೆ.
ದೇಶದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯದ ನಂತರದ ಕಳೆದ ಏಳು ದಶಕಗಳಲ್ಲಿ ಭಾರತ ವಿವಿಧ ಸರ್ಕಾರಗಳಿಂದ ರೂಪುಗೊಂಡಿದೆ. ದೇಶವು ಅಭಿವೃದ್ಧಿಯ ಸರಿ ದಾರಿಯಲ್ಲಿ ಸಾಗುತ್ತಿದೆ. ಚುನಾಯಿತ ಪ್ರತಿನಿಧಿಯಾಗಿ, ಆಗುಹೋಗುಗಳನ್ನು ಪರಿಶೀಲಿಸಿ ಸಂಸತ್ತಿನ ಒಳಗೆ ಚರ್ಚಿಸುವುದು ಸೂಕ್ತ ನಡೆಯಾಗಿದೆ ಎಂದಿದ್ದಾರೆ.