Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ಏಕದಿನ ಹಬ್ಬ ಇಂದಿನಿಂದ ಶುರು

ಭಾರತ-ಆಸ್ಟ್ರೇಲಿಯಾ ಏಕದಿನ ಹಬ್ಬ ಇಂದಿನಿಂದ ಶುರು
ಮುಂಬೈ , ಶುಕ್ರವಾರ, 17 ಮಾರ್ಚ್ 2023 (08:50 IST)
Photo Courtesy: Twitter
ಮುಂಬೈ: ಟೆಸ್ಟ್ ಸರಣಿ ಗೆಲುವಿನ ಬಳಿಕ ಇದೀಗ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲು ಸಜ್ಜಾಗಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಖಾಯಂ ನಾಯಕ ರೋಹಿತ್ ಶರ್ಮಾ ಗೈರಾಗಲಿದ್ದಾರೆ. ಅವರ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಶುಬ್ಮನ್ ಗಿಲ್ ಜೊತೆ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಶ್ರೇಯಸ್ ಅಯ್ಯರ್ ಕೂಡಾ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದ ಜವಾಬ್ಧಾರಿ ನಿಭಾಯಿಸಬೇಕಾದೀತು.

ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ವೇಗಿಗಳಾಗಿ ಕಣಕ್ಕಿಳಯಬಹುದು. ಮೂರನೇ ವೇಗಿಯಾಗಿ ಸ್ವತಃ ಹಾರ್ದಿಕ ಪಾಂಡ್ಯ ಬೌಲಿಂಗ್ ಮಾಡಬಹುದು. ಸ್ಪಿನ್ನರ್ ಗಳಾಗಿ ರವೀಂದ್ರ ಜಡೇಜಾ ಇರುವುದರಿಂದ ಯಜುವೇಂದ್ರ ಚಾಹಲ್ ಅಥವಾ ಕುಲದೀಪ್ ಯಾದವ್ ಇಬ್ಬರಲ್ಲಿ ಒಬ್ಬರು ಸ್ಥಾನ ತ್ಯಾಗ ಮಾಡಬೇಕಾಗುತ್ತದೆ. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್: ಡೆಲ್ಲಿ ಸೋಲಿಸಿ ಎಲಿಮಿನೇಷನ್ ಕುಣಿಕೆಯಿಂದ ಪಾರಾದ ಗುಜರಾತ್