Publish Date: Sat, 25 Mar 2023 (20:00 IST)
Updated Date: Sat, 25 Mar 2023 (18:55 IST)
ಯುಗಾದಿ ಹಬ್ಬದ ದಿನದಂದು ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಇಂದು ಬೆಳಿಗ್ಗೆ 124 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಎಐಸಿಸಿಸಿ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಈ ಪಟ್ಟಿಯಲ್ಲಿ ಗೆಲ್ಲುವಂತ ಅಭ್ಯರ್ಥಿಗಳು ಮತ್ತು ಗೊಂದಲ ಈರದೇ ಈರುವ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.ಆರು ಹಾಲಿ ಶಾಸಕರಿಗೆ ಈ ಪಟ್ಟಿಯಿಂದ ಕೈ ಬಿಡಲಾಗಿದೆ.ಇನ್ನೂ ಸಿದ್ದರಾಮಯ್ಯ ನವರ ಕ್ಷೇತ್ರದ ಬಗ್ಗೆಯೂ ಕೂತಹಲ ಮೂಡಿತ್ತು. ಅದಕ್ಕೆ ವರುಣ ಕ್ಷೇತ್ರವನ್ನು ಕೊಟ್ಟು ಕೂತಹಲಕ್ಕೆ ತೆರೆ ಎಳೆದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಇದೇ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತೇನೆ ಎಂದು ಹೇಳಿರುವ ಕೋಲಾರ ಕ್ಷೇತ್ರಕ್ಕೂ ಘೋಷಣೆ ಮಾಡಿಲ್ಲ ಹಾಗೇ ಬದಾಮಿ ಕ್ಷೇತ್ರಕ್ಕೂ ಘೋಷಣೆ ಮಾಡಿಲ್ಲ.ಈ ದರಿಂದ ಸಿದ್ದರಾಮಯ್ಯ ನವರಿಗೆ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ನೀಡುತ್ತಾ ಎಂಬ ಪ್ರಶ್ನೇ ಮೂಡಿದೆ.