ನಗರದಲ್ಲಿ ವಾಸಿಸುವ 50% ಜನರಿಗೆ -ಫ್ಯಾಟೀ ಲಿವರ್ ಅಟಕಾಯಿಸಿಕೊಳ್ತಿದ್ದು, ಜನರು ಎಚ್ಚರಿಗೆ ವಹಿಸಬೇಕಾಗಿದೆ.ನಗರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ನಗರ ಪ್ರದೇಶದ ಜೀವನವೇ ನಮ್ಮ ಜೀವಕ್ಕೆ ಆಪತ್ತು ತರಲಿದ್ದು, ವಾಕ್, ಜಾಗಿಂಗ್, ವ್ಯಾಯಾಮ, ಯೋಗಾಸನ ಮಾಡಲಿಲ್ಲವೆಂದ್ರೆ ನಿಮ್ಮ ಲಿವರ್ಗೆ ಕುತ್ತು ಬರಲಿದೆ. ICMRನಿಂದ ಸಂಶೋಧನೆ ನಡೆಸಿದ್ದು, ಫ್ಯಾಟೀ ಲಿವರ್ ಡೇಂಜರ್ ಡೇಂಜರ್ ಎಂಬುದು ಬೆಳಕಿದೆ ಬಂದಿದೆ.ದಿನೇ ದಿನೆ ಆರಾಮದಾಯಕ ಬದುಕಿನಿಂದಲೇ ಲಿವರ್ನಲ್ಲಿ ಕೊಬ್ಬಿನಾಂಶ ಕಾಣಿಸಿಕೊಳ್ಳಲಿದೆ. ನಗರವಾಸಿಗಳಲ್ಲೇ ಈ ಸಮಸ್ಯೆ ಕಾಣಿಸಿಕೊಳ್ತಿದೆ ಎಂದು ICMR ಸಂಶೋಧನೆ ಹೇಳಿದ್ದು, ಜನರು ಎಚ್ಚರಿಕೆ ಬಹಿಸಬೇಕಾಗಿದೆ.