Publish Date: Sat, 25 Mar 2023 (08:06 IST)
Updated Date: Sat, 25 Mar 2023 (09:34 IST)
ಬೆಂಗಳೂರು : 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.
ಯಾವ ಕ್ಷೇತ್ರಕ್ಕೆ ಯಾರ್ಯಾರು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾದಿಂದ ಕಡೆಗೂ ಸ್ಪರ್ಧೆ ಮಾಡುವುದು ಅಂತಿಮವಾಗಿದೆ. ಟೀ. ನರಸೀಪುರದಲ್ಲಿ ಹೆಚ್.ಸಿ.ಮಹದೇವಪ್ಪ ಹಾಗೂ ಕನಕಪುರದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧೆ ಖಚಿತವಾಗಿದೆ.
ದೇವನಹಳ್ಳಿಯಿಂದ ಮುನಿಯಪ್ಪಗೆ ಟಿಕೆಟ್, ಬೆಂಗಳೂರು ರಾಜಾಜಿನಗರದಲ್ಲಿ ಪುಟ್ಟಣ್ಣ, ಆರ್ ಆರ್ ನಗರ ಕುಸುಮಾ ಹೆಚ್, ನರಸಿಂಹರಾಜ ತನ್ವಿರ್ ಸೇಠ್ಗೆ ಟಿಕೆಟ್ ಘೋಷಣೆಯಾಗಿದೆ.