Publish Date: Thu, 17 Jan 2019 (18:23 IST)
Updated Date: Thu, 17 Jan 2019 (18:25 IST)
ಬಿಜೆಪಿ ಮುಖಂಡರ ನಡೆ ವಿರುದ್ಧ ಕುದುರೆ ಏರಿ ಬಂದು ಎಐಸಿಸಿ ಕಾರ್ಯದರ್ಶಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಕುದುರೆ ವ್ಯಾಪಾರದ ವಿರುದ್ಧ ಕುದುರೆ ಮೇಲೆ ಕುಳಿತೇ ಪ್ರೊಟೆಸ್ಟ್ ಮಾಡಲಾಗಿದೆ.
ಸ್ಟ್ರೈಕ್ ಗೆ ವಿಭಿನ್ನವಾಗಿ ಬಂದ ಮಹಾರಾಷ್ಟ್ರ ಉಸ್ತುವಾರಿ ಸಂದೀಪ್ ಗಮನ ಸೆಳೆದರು.
ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿಯಿಂದ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂದು ದೂರಿದರು.
ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು, ಕುದುರೆ ವ್ಯಾಪಾರದ ಮೂಲಕ ಬಿಜೆಪಿ ರಾಜಕೀಯ ಅಸಹ್ಯವಾಗಿ ಮಾಡುತ್ತಿದೆ ಎಂದು ಕಿಡಿಕಾರಿದರು.