Publish Date: Mon, 08 May 2023 (10:58 IST)
Updated Date: Mon, 08 May 2023 (10:45 IST)
ಮೈಸೂರು : ಕರ್ನಾಟಕ ಭಾರತದ ಭಾಗ ಅಲ್ಲ ಅಂತ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಕರ್ನಾಟಕವನ್ನು ಭಾರತದಿಂದ ಬೇರೆ ಮಾಡುವ ಹುನ್ನಾರವನ್ನು ಕಾಂಗ್ರೆಸ್ ನಡೆಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದರು.
ನಂಜನಗೂಡಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಪ್ರತಿಯೊಬ್ಬ ಕನ್ನಡಿಗರು ಗಂಭೀರವಾಗಿ ಕೇಳಬೇಕು. ಕರ್ನಾಟಕ ಭಾರತದ ಭಾಗ ಅಲ್ಲ ಅಂತ ಕಾಂಗ್ರೆಸ್ನವರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಬೇರೆ ಮಾಡಲು ಹುನ್ನಾರ ನಡೆಸಿದೆ. ಕಾಂಗ್ರೆಸ್ ಈ ರೀತಿ ಯೋಚನೆ ಮಾಡುತ್ತದೆ ಅಂತ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಕನ್ನಡಿಗರ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.