Select Your Language

Notifications

webdunia
webdunia
webdunia
webdunia

ಬ್ರಿಜ್‌ಭೂಷಣ್‌ ಬಂಧನಕ್ಕೆ ಗಡುವು ನೀಡಿದ ಕುಸ್ತಿಪಟುಗಳು

ಬ್ರಿಜ್‌ಭೂಷಣ್‌ ಬಂಧನಕ್ಕೆ ಗಡುವು ನೀಡಿದ ಕುಸ್ತಿಪಟುಗಳು
ನವದೆಹಲಿ , ಸೋಮವಾರ, 8 ಮೇ 2023 (10:39 IST)
ನವದೆಹಲಿ : ಇಲ್ಲಿನ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಮೇ 21ರ ಒಳಗೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರೂ ಆಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ನನ್ನ ಬಂಧಿಸುವಂತೆ ಗಡುವು ನೀಡಿದ್ದಾರೆ.
 
ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿ 31 ಸದಸ್ಯರನ್ನೊಳಗೊಂಡ ಕುಸ್ತಿಪಟುಗಳ ಸಮಿತಿ ಮೇ 21ರ ಒಳಗೆ ಬಂಧಿಸದಿದ್ದರೆ ಮಹತ್ವದ ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್, ಖಾಪ್ ಮಹಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಮತ್ತು ಸಂಕ್ಯುತ್ ಕಿಸ್ನಾ ಮೋರ್ಚಾದ (ರಾಜಕೀಯೇತರ) ಬಲದೇವ್ ಸಿಂಗ್ ಸಿರ್ಸಾ ಅವರೂ ಸಹ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ ಅಖPಅ ಸೆಕ್ಷನ್ 161 ಹಾಗೂ 164 ಅಡಿಯಲ್ಲಿ ಸಂತ್ರಸ್ತರ ಹೇಳಿಕೆಗಳನ್ನ ದಾಖಲಿಸಲಾಗಿದೆ. ಆದ್ರೆ ಈವರೆಗೆ ಬಂಧಿಸುವ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಮೇ 21ರ ಒಳಗೆ ಬ್ರಿಜ್ ಭೂಷಣ್ನನ್ನ ಬಂಧಿಸದಿದ್ದರೆ ಪ್ರತಿಭಟನೆ ಇನ್ನೂ ದೊಡ್ಡದಾಗಲಿದೆ ಎಂದು ವಿನೇಶ್ ಫೋಗಟ್ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಪ್ರಚಾರಕ್ಕೆ ತೆರೆ, `ಎಣ್ಣೆ’ ಸಿಗಲ್ಲ!