Publish Date: Mon, 08 May 2023 (08:17 IST)
Updated Date: Mon, 08 May 2023 (10:19 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರ್ನಾಟಕ ವಿಧಾನಸಭಾ ಚುಣಾವಣೆಯ ಕೊನೆಯ ದಿನದ ಪ್ರಚಾರ ಮುಗಿಸಿದ್ದಾರೆ. ಇದೀಗ ಪ್ರಧಾನಿ ಬಂದು ಹೋದ ಮೇಲೆ ಬಿಜೆಪಿ ಗೆದ್ದೇ ಗೆಲ್ಲುತ್ತೆ ಅನ್ನೋ ವಿಶ್ವಾಸ ಕಮಲ ಪಾಳದಲ್ಲಿ ಮೂಡಿದೆ.
ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು? ರಾಜಧಾನಿಯಲ್ಲೂ ಗುಜರಾತ್ ಇತಿಹಾಸ ರಿಪೀಟ್ ಆಗೇಬಿಡುತ್ತಾ? ಬೆಂಗಳೂರಿನ ಮೇಲೆ ಬಿಜೆಪಿ ಮತ್ತೆ ಹಿಡಿತ ಸಾಧಿಸಲು ರಹದಾರಿಯಾಗುತ್ತಾ ನಮೋ ರೋಡ್ ಶೋ..? ಅನ್ನೋ ಬಗ್ಗೆ ಬಿಜೆಪಿ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಗುಜರಾತ್ನ ಅಹಮದಾಬಾದ್ ಮಾದರಿಯ ರೋಡ್ ಶೋ ನಡೆಸಿದ್ದ ಮೋದಿ ಸಕ್ಸಸ್ ತಂದುಕೊಟ್ಟಿದ್ದರು. ಬೆಂಗಳೂರಿನಲ್ಲೂ ಅದೇ ಪ್ರಮಾಣದ ಸಕ್ಸಸ್ ತಂದುಕೊಡುವ ನಿರೀಕ್ಷೆಯನ್ನ ಹುಟ್ಟುಹಾಕಿದ್ದಾರೆ. ಗುಜರಾತ್ ರೋಡ್ ಶೋ ಹಿಸ್ಟರಿ ಇಲ್ಲೂ ಮರುಕಳಿಸುವ ಭರವಸೆಯಲ್ಲಿ ಬಿಜೆಪಿ ಇದೆ.