ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2ನೇ ದಿನವೂ ಮೋದಿ ವರ್ಚಸ್ಸು ಜೋರಾಗಿತ್ತು. ನ್ಯೂ ತಿಪ್ಪಸಂದ್ರದಿಂದ ಪ್ರಾರಂಭವಾಗಿದ್ದ ಶಾಂತಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಅಂತ್ಯಗೊಂಡಿದ್ದು, ಜನರಿಂದ ಅದ್ಬುತ ಪ್ರತಿಕ್ರಿಯೆ ಬಂದಿದ್ದು ಕರ್ನಾಟಕದಲ್ಲಿ ದಾಖಲೆ ಬರೆದಿದೆ.
 
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೆನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಕಮಾಲ್ ಮಾಡಿದ್ದಾರೆ.
 
 			
 
 			
			                     
							
							
			        							
								
																	ಮೊದಲ ಬಾರಿಗೆ ಕನ್ನಡನಾಡಿನಲ್ಲಿ ಪ್ರಧಾನಿಯೊಬ್ಬರು 2 ದಿನಗಳ ಕಾಲ ಅತಿದೊಡ್ಡ ರೋಡ್ ಶೋ ಮಾಡಿ ದಾಖಲೆ ಬರೆದಿದ್ದಾರೆ. ಸತತ 2 ದಿನಗಳ ಕಾಲ ನಡೆಸಿದ ರೋಡ್ ಶೋನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಯಶಸ್ವಿಯಾಗಿ ಸಂಪನ್ನಗೊಂಡಿದೆ.
									
										
								
																	ಇಂದು 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ದೂರದವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್ ಶೋ ನಡೆದಿದೆ.