Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಶುರು- ಆರ್ ಅಶೋಕ್

ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಶುರು- ಆರ್ ಅಶೋಕ್
bangalore , ಮಂಗಳವಾರ, 2 ಜನವರಿ 2024 (16:22 IST)
ವಿರೋಧ ಪಕ್ಷ ನಾಯಕ ಆರ್ ಅಶೋಕ್ ವಿಧಾನಸೌಧದ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.ವಿಧಾನ ಪರಿಷತ್ ನಲ್ಲೂ ವಿರೋಧ ಪಕ್ಷ ನಾಯಕರು ಬಂದಿದ್ದಾರೆ.ಎರೆಡೂ ಕಡೆ ಹೋರಾಟ ಮಾಡೋಕೆ ಮತ್ತಷ್ಟು ಶಕ್ತಿ ತುಂಬಿದೆ.ಇದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ.
 
ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಶುರುವಾಗಿದೆ.ಏಕ ಏಕಿ ರಾಮಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಆಗ್ತಾ ಇದೇ.ಲಕ್ಷಾಂತರ ಪ್ರಾಣ ತ್ಯಾಗ ಆಗಿದೆ.ನಾನು ಕೂಡ  ಕರ ಸೇವೆಯಲ್ಲಿ  ಭಾಗಿ ಆಗಿದ್ದೆ.ಮೋದಿ ಅವರು ಕೂಡ ರೈಲ್ವೆ ನಿಲ್ದಾಣ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ.ಆದ್ರೆ ಹುಬ್ಬಳ್ಳಿಯಲ್ಲಿ ಇಬ್ಬರು ಕಾರ್ಯಕರ್ತರನ್ನ ಅರೆಸ್ಟ್ ಮಾಡಿದ್ದಾರೆ.ರಾಮ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿದ್ರು.ಹಳೆ ಕೇಸ್ ಓಪನ್ ಮಾಡಿ ಜೈಲಿಗೆ ಹಾಕಿದ್ದಾರೆ.
 
ಮನೆ ಮನೆಯಲ್ಲಿ ಜ್ಯೋತಿ ಬೆಳಗಿಸಿ ಎಂಬ ಕರೆ ಪ್ರಧಾನಿ ಕೊಟ್ಟಿದ್ದಾರೆ.ಆದ್ರೆ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡ್ತಾ ಇದೇ.ನಾನು ಕೂಡ ರಾಮ ಜನ್ಮ ಭೂಮಿಗಾಗಿ ಭಾಗಿ ಆಗಿದ್ದೆ.ನನ್ನ ಕೂಡ ಬಂಧನ ಮಾಡ್ತೀರಾ ಅಷ್ಟು ಧೈರ್ಯ ಇದಿಯಾ.ಯಡಿಯೂರಪ್ಪ ಕೂಡ ಭಾಗಿ ಆಗಿದ್ರು.ರಾಮ ಭಕ್ತರನ್ನ ಅರೆಸ್ಟ್ ಮಾಡ್ತಾ ಇದ್ದೀರಾ.ಟಿಪ್ಪು ಮನಸ್ಥಿತಿ ತೋರುತ್ತಿದೆ.ಕೂಡ ಲೇ ಸರ್ಕಾರ ಅರೆಸ್ಟ್ ಮಾಡಿದಾವ್ರನ್ನ ಬಿಡುಗಡೆ ಮಾಡಬೇಕು.

ಮೂವತ್ತು ವರ್ಷಗಳ ಹಿಂದೆ ರಾಮ ಜನ್ಮ ಭೂಮಿಗಾಗಿ ಹೊರಟ ಮಾಡಿದ್ರು.ಅವರನ್ನ ಈಗ ಅರೆಸ್ಟ್ ಮಾಡಿದ್ದಾರೆ.ಕಾರ್ಯಕರ್ತರು ಮನೆ ಮನೆಗೆ ರಾಮ ಭಕ್ತರು ಹೋಗ್ತಾ ಇದಾರೆ.ರಾಮ ಮೆರವಣಿಗೆ, ರಾಮನ ಪರ ಘೋಷಣೆ ಕೂಡಗಿದ್ರು.ಅಂತವರನ್ನ ಈಗ ಅರೆಸ್ಟ್ ಮಾಡ್ತಾ ಇದಾರೆ.ಬೇಕು ಅಂತಾನೆ ಹಳೆ ಕೇಸ್ ತೆಗೆದು ವಿಚಾರ ನಡೆಸಿದ್ದಾರೆ.ನನಗೆ ಮಾಹಿತಿ ಪ್ರಕಾರ ಇನ್ನು ಪ್ರಮುಖರು ಯಾರು ಯಾರು ಇದ್ರೂ ಅವರನ್ನೆಲ್ಲ ಪತ್ತೆ ಹಚ್ಚಿ ಎಂದು ಸರ್ಕಾರ ಹೇಳಿದೆ ಎಂದು ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್‌ ಗಾಂಧಿಯನ್ನ ತುಂಬಾ ಹೈಲೈಟ್‌ ಮಾಡಬೇಡಿ