Select Your Language

Notifications

webdunia
webdunia
webdunia
webdunia

ಹೂವು ಸರಿಯಾಗಿ ಅಳತೆ ಕೊಡ್ತಿಲ್ಲ ಅಂತ ಸಿಎಂಗೆ ದೂರು ಕೊಟ್ರು: ಮುಂದೇನಾಯ್ತು?

ಹೂವು ಸರಿಯಾಗಿ ಅಳತೆ ಕೊಡ್ತಿಲ್ಲ ಅಂತ ಸಿಎಂಗೆ ದೂರು ಕೊಟ್ರು: ಮುಂದೇನಾಯ್ತು?
ಚಿತ್ರದುರ್ಗ , ಶುಕ್ರವಾರ, 24 ಆಗಸ್ಟ್ 2018 (17:32 IST)
ಹೂವಿನ ಬೆಳೆಗಾರರು ಮತ್ತು ವ್ಯಾಪಾರಿಗಳ ಮಧ್ಯೆ  ಹೂವಿನ ಅಳತೆಯಲ್ಲಿ  ಏರುಪೇರು ಉಂಟಾಗಿದೆ. ಹೀಗಾಗಿ ನೊಂದವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು. ಆ ದೂರು ಮುಂದೆ ಯಾವ ಯಾವ ಹಂತ ತಲುಪುತ್ತಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ…

ಹೂವಿನ ಬೆಳೆಗಾರರು ಮತ್ತು ವ್ಯಾಪಾರಿಗಳ ಮಧ್ಯೆ  ಹೂವಿನ ಅಳತೆಯಲ್ಲಿ  ಏರುಪೇರು ಉಂಟಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ  ಹಿರಿಯೂರು ತಹಶೀಲ್ದಾರ್ ಜೆ.ಸಿ ವೆಂಕಟೇಶಯ್ಯ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಚಿತ್ರದುರ್ಗ ನಗರದ ನೆಹರು ಹೂವಿನ ಮಾರುಕಟ್ಟೆಗೆ ಭೇಟಿ ನೀಡಿ ತಪಾಸಣೆ ನಡೆಸಿದರು.  ಹೂವಿನ ವ್ಯಾಪಾರಿಗಳಿಗೆ ಸಂಪ್ರಾಯಿಕ ಕೈ ಅಳತೆ  ಬಿಟ್ಟು ವೈಜ್ಞಾನಿಕ  ಮೀಟರ್  ಅಳತೆ ಪಟ್ಟಿಯಲ್ಲಿ ಹೂವು ಅಳತೆ ಮಾಡಲು ಜಾಗೃತಿ ಮೂಡಿಸಿದರು.
ತಹಶೀಲ್ದಾರ್ ಜೆ.ಸಿ ವೆಂಕಟೇಶಯ್ಯ ಮಾತನಾಡಿ,  ಇಂದಿನಿಂದಲೇ ಮೀಟರ್ ಅಳತೆಯಲ್ಲಿ  ಹೂವು ಮಾರಲು ಸೂಚಿಸಿದರು. ಒಂದು ವೇಳೆ ಮೀಟರ್ ಬಳಸದೆ ಇದ್ದಲ್ಲಿ ಹೂವಿನ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ ಮಂಜುನಾಥ್ ಮಾನತಾಡಿ, ಕಟ್ಟಿದ ಹೂವುವನ್ನು ಮೀಟರ್ ಅಳತೆಯಲ್ಲಿ ಮತ್ತು ಬಿಡಿ ಹೂವುಗಳನ್ನು ತೂಕದ ಲೆಕ್ಕದಲ್ಲಿ ವ್ಯವಹರಿಸುವಂತೆ ಸೂಚಿಸಿದರು. ಇದಕ್ಕೆ ಸಂಬಂಧಿಸಿದಂತೆ ಇಬ್ಬರ ಹೂವಿನ ವ್ಯಾಪಾರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೋಟೆ ನಗರಿಯಲ್ಲಿ ವರ ಮಹಾಲಕ್ಷ್ಮಿ ಹಬ್ಬದ ಸಡಗರ