ಮಹಿಳೆಯರು ತಲೆಗೆ ಈ ಹೂವು ಮುಡಿದರೆ ದೇವರ ಅನುಗ್ರಹ ದೊರಕಲಿದೆಯಂತೆ

ಸೋಮವಾರ, 13 ಆಗಸ್ಟ್ 2018 (07:21 IST)
ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ತಲೆಯಲ್ಲಿ ಹೂ ಮುಡಿಯುವುದು ತುಂಬಾ ಸಾಮಾನ್ಯ ವಿಷಯ. ಪ್ರತಿದಿನ ಮಹಿಳೆಯರು ಅವರ  ಅಲಂಕಾರದಲ್ಲಿ ಹೂವನ್ನು ಬಳಸುತ್ತಾರೆ .ಆದರೆ ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಹಲವು ಧಾರ್ಮಿಕ ಉಪಯೋಗಗಳು ಸಹ ಇದರಲ್ಲಿ ಅಡಗಿವೆ. ಒಂದೊಂದು ಹೂವು ಸಹ ಒಂದೊಂದು ವಿಶೇಷ ವೈಶಿಷ್ಟ್ಯತೆಯನ್ನು ಹೊಂದಿದೆ.


ಸುವಾಸನೆಯಿಂದ ಕೂಡಿದ ಈ ಮಲ್ಲಿಗೆ ಹೂವು ಶ್ರೇಯಸ್ಸು ಮತ್ತು ಅದೃಷ್ಟಕ್ಕೂ ಪ್ರತೀಕವಾಗಿದ್ದು ಹೂವುಗಳ ರಾಣಿ ಎಂದೇ ಮಲ್ಲಿಗೆಯನ್ನು ಕರೆಯಲಾಗುತ್ತದೆ. ಹೂವೆಂದರೆ ಭಗವಾನ್ ಶ್ರೀ ವಿಷ್ಣು ದೇವರಿಗೆ ತುಂಬಾ ಪ್ರೀತಿ ಮತ್ತು ಇಷ್ಟ ಇದರ ಸುವಾಸನೆಯಿಂದ ಮನಸ್ಸಿನಲ್ಲಿ  ಶಾಂತಿಯ ಭಾವನೆ ಮೂಡುತ್ತದೆ ಆದ್ದರಿಂದ ಮಹಿಳೆಯರು ಮಲ್ಲಿಗೆ ಹೂವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಗುಲಾಬಿ ಹೂ ಪ್ರೀತಿ ಪ್ರೇಮ ಮತ್ತು ಸ್ನೇಹದ ಸಂಕೇತವಾಗಿದೆ. ಪ್ರೀತಿ ,ಪ್ರೇಮವನ್ನು ವ್ಯಕ್ತಪಡಿಸಲು ಈ ಹೂವನ್ನು ಅಧಿಕವಾಗಿ ಬಳಸಲಾಗುತ್ತದೆ. ಈ ಗುಲಾಬಿ ಹೂವಿನಿಂದ ಮಹಾದೇವನಾದ ಶಿವನಿಗೆ ಮತ್ತು ಗಣೇಶನಿಗೆ ಪೂಜೆ ಮಾಡಿದರೆ ಅವರ ಅನುಗ್ರಹ ಶೀಘ್ರವಾಗಿ ದೊರೆಯುವುದು. ಈ ಹೂವನ್ನು ಮಹಿಳೆಯರು ಮುಡಿಯುವುದರಿಂದ ಪ್ರೀತಿ ಪ್ರೇಮ ಹೆಚ್ಚಾಗುತ್ತದೆ.

ಸೇವಂತಿಗೆ  ಹೂವು ಸಂತೋಷದ ಸಂಕೇತವಾಗಿದೆ. ಮಹಿಳೆಯರು ಈ ಹೂವನ್ನು ಮುಡಿಯುವುದರಿಂದ ಅವರ ಕುಟುಂಬದಲ್ಲಿ ಸಂತೋಷ ಮತ್ತು ಅದೃಷ್ಟ ಒಲಿದು ಬರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳುತ್ತಾರೆ. ಈ ಹೂವನ್ನು ಮಹಿಳೆಯರು ಮುಡಿಯುವುದರಿಂದ ಐಷಾರಾಮಿ ಜೀವನ ಹೊಂದುವ ಅದೃಷ್ಟ ಅವರದ್ದಾಗುವುದು.

ದಾಸವಾಳ ಹೂವನ್ನು ಶಕ್ತಿಯ ಪ್ರತಿರೂಪವಾದ ಕಾಳಿಕಾ ದೇವಿಯನ್ನು ಪೂಜಿಸಲು ಹೆಚ್ಚಾಗಿ ಬಳಸಲಾಗುತ್ತದೆ.ಆದ್ದರಿಂದ ಈ ಹೂವು ಶಕ್ತಿಯ ಸಂಕೇತವಾಗಿದೆ.ಈ ದಾಸವಾಳದ ಹೂವನ್ನು ಮಹಿಳೆಯರು ಮುಡಿಯುವುದರಿಂದ ಬೇರೆಯವರ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಇದು ತಡೆಯುತ್ತದೆ. ಅಷ್ಟೇ  ಅಲ್ಲದೆ ಸಾಲದ ಬಾಧೆಯ ಸುಳಿಯಿಂದ ಶೀಘ್ರವೆೇ ದೂರವಾಗಿ  ಐಶ್ವರ್ಯಗಳನ್ನು ಸಹ ಪಡೆಯಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯಾವ ವಾರ ಯಾವ ದೇವರನ್ನು ಪೂಜಿಸಿದರೆ ಕಷ್ಟಗಳು ದೂರವಾಗುತ್ತದೆ ಎಂಬುದನ್ನು ತಿಳಿಬೇಕಾ?