Select Your Language

Notifications

webdunia
webdunia
webdunia
webdunia

5 ನಿಮಿಷದಲ್ಲಿಹಳದಿ ಹಲ್ಲನ್ನು ಬಿಳುಪಾಗಿಸಲು ಹೀಗೆ ಮಾಡಿ.

5 ನಿಮಿಷದಲ್ಲಿಹಳದಿ  ಹಲ್ಲನ್ನು ಬಿಳುಪಾಗಿಸಲು ಹೀಗೆ ಮಾಡಿ.
ಬೆಂಗಳೂರು , ಭಾನುವಾರ, 12 ಆಗಸ್ಟ್ 2018 (06:45 IST)
ಬೆಂಗಳೂರು : ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ಅನಿಸುವುದು, ಆದರೆ ಅದರ ಬಣ್ಣ ಮಾತ್ರ ಹಳದಿ ಇದ್ದರೆ ನಾವು ನಾಲ್ಕು ಜನರ ಮುಂದೆ ನಗಲು ಸಹ ಮುಜುಗರ, ಕಷ್ಟ ಪಡಬೇಕಾಗುತ್ತದೆ. ಬಹಳಷ್ಟು ಜನರು ಹಲ್ಲುಗಳನ್ನು ಎಷ್ಟೇ ಉಜ್ಜಿದರೂ, ತಿಕ್ಕಿದರೂ ಅದು ಹಳದಿಯಾಗಿಯೇ ಗೋಚರಿಸುತ್ತದೆ. ಆದರೆ ಈ ಸರಳ ವಿಧಾನ ಅನುಸರಿಸಿದರೆ ಸಾಕು ಬರಿಯ 5 ನಿಮಿಷದಲ್ಲಿ ಹಲ್ಲುಗಳು ಬೆಳ್ಳಗೆ, ಪಳ ಪಳ ಹೊಳಿಯುವಂತೆ ಮಾಡಿಕೊಳ್ಳಬಹುದು.


* ನಿಮ್ಮ ಹಲ್ಲಿನ ಮೇಲೆ ಹಳದಿ ಬಣ್ಣ ಹೆಚ್ಚಾಗಿ ರೂಪುಗೊಂಡಿದ್ದಾರೆ, ಈ ಎರಡು ವಸ್ತುಗಳಿಂದ ಅದನ್ನು ನೀಗಿಸಬಹುದು, ಅವೇನೆಂದರೆ, ಬೇಕಿಂಗ್ ಸೋಡಾ ಹಾಗು ನಿಂಬೆ ಹಣ್ಣು, ಒಂದು ಚಿಕ್ಕ ಬಟ್ಟಲಿನಲ್ಲಿ ಬೇಕಿಂಗ್ ಸೋಡಾ ಒಂದು ಚಿಟಿಕೆಯಷ್ಟು ತೆಗೆದುಕೊಂಡು ಅದಕ್ಕೆ ಅರ್ದ ನಿಂಬೆ ಹಣ್ಣನ್ನು ಹಿಂಡಿ ಚನ್ನಾಗಿ ಬೆರೆಸಿಕೊಂಡು ಅದು ಪಾರದರ್ಶಕವಾಗಿ ಕಾಣುವ ಹಾಗೆ ಕರಗಿ ಬಿಡುತ್ತದೆ, ಆ ದ್ರವವನ್ನ ತೆಗೆದುಕೊಂಡು ನಿಮ್ಮ ಬೆರಳಿಂದ ಚನ್ನಾಗಿ ಉಜ್ಜಿಕೊಳ್ಳಿ, ಉಜ್ಜಿಕೊಂಡು 5 ನಿಮಿಷ ಆದನಂತರ ನೀರು ಹಾಕಿ ತೊಳೆದುಕೊಳ್ಳಿ ಹಾಗು ತಕ್ಷಣ ನೀರನ್ನ ಹೊರಗೆ ಹಾಕಿಬಿಡಿ. ಇದರಿಂದ ನಿಮ್ಮ ಹಲ್ಲುಗಳು ನಿಸ್ಸಂದೇಹವಾಗಿ ಹೊಳೆಯಲಾರಂಬೀಸುತ್ತದೆ

*ಸ್ವಲ್ಪ ಉಪ್ಪು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನ ಬೆರೆಸಿ ನಿಮ್ಮ ಹಳದಿಯುತ ಹಲ್ಲುಗಳ ಮೇಲೆ ಉಜ್ಜಿದರೂ ಸಹ ನಿಮ್ಮ ಹಲ್ಲು ಬೆಳ್ಳಗೆ ಶುಬ್ರವಾಗಿ ಕಾಣುತ್ತದೆ.

*ಸ್ವಲ್ಪ ಆ್ಯಪಲ್ ಸಿಡರ್‌ ವಿನೆಗರ್ ಅನ್ನು ಬ್ರಷ್‌ಗೆ ಹಾಕಿ ಹಲ್ಲು ತಿಕ್ಕಿ ಈ ರೀತಿ ಮಾಡಿದರೆ ಹಲ್ಲು ಆಕರ್ಷಕವಾಗಿ ಕಾಣುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಕಾಡದಿರಲು ಇವುಗಳನ್ನು ನೀಡಿ