ಬೆಂಗಳೂರು : ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರ ವಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರದ ಐಟಂ ಸಾಂಗ್ ವೊಂದರಲ್ಲಿ ಮಿಲ್ಕ್ ಬ್ಯೂಟಿ ತಮನ್ನಾ ನಟಿಸಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಈ 4 ನಿಮಿಷದ ಸಾಂಗ್ ಗೆ ನಟಿ ತಮನ್ನಾ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ.
ಬಾಹುಬಲಿ ಚಿತ್ರದ ಮೂಲಕ ಫೇಮಸ್ ಆದ ನಟಿ ತಮನ್ನಾ ಅವರಿಗೆ ಸಾಲು ಸಾಲು ಚಿತ್ರಗಳು ಕ್ಯೂನಲ್ಲಿನಲ್ಲಿ ಇವೆಯಂತೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರದ ನಾನು ಬಳ್ಳಿಯ ಮಿಂಚು ಎಂಬ ಐಟಂ ಸಾಂಗ್ ಗೆ ನಟ ಯಶ್ ರೊಂದಿಗೆ ಕುಣಿದಿದ್ದಾರೆ. ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಇಂತಹ ಬ್ಯುಸಿ ಶೆಡ್ಯೂಲ್ ನಡುವೆಯೂ ಬಂದು ಕೆ.ಜಿ.ಎಫ್ ನ 4 ನಿಮಿಷದ ಸ್ಪೆಷಲ್ ಸಾಂಗ್ ನಲ್ಲಿ ನಟಿಸಿದ ನಟಿ ತಮನ್ನಾ ಸುಮಾರು 40 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ