Select Your Language

Notifications

webdunia
webdunia
webdunia
webdunia

ನಾಲ್ಕನೂರು ಅಡಿ ಮೇಲಿನಿಂದ ಹೂವಿನ ಕಸದ ರಾಶಿ ಮೇಲೆ ಆ ಯುವತಿ ಬಿದ್ದು, ಬದುಕಿದ್ದು ಹೇಗೆ?

ನಾಲ್ಕನೂರು ಅಡಿ ಮೇಲಿನಿಂದ ಹೂವಿನ ಕಸದ ರಾಶಿ ಮೇಲೆ ಆ ಯುವತಿ ಬಿದ್ದು, ಬದುಕಿದ್ದು ಹೇಗೆ?
ರಾಮನಗರ , ಶುಕ್ರವಾರ, 3 ಆಗಸ್ಟ್ 2018 (17:20 IST)
ಆ ಬೆಟ್ಟ ಸಾವಿರಾರು ಅಡಿ ಎತ್ತರ ಇರುವಂತದ್ದು ಆದರೂ ಆಕೆ ಮೇಲಿನಿಂದ ಬೇಕಂತ ಬಿದ್ದಿಲ್ಲ. ಬೆಟ್ಟದಿಂದ ಕಾಲುಜಾರಿ ಬಿದ್ದಿರೋದು. ಅದು ಬರೋಬ್ಬರಿ ನಾಲ್ಕನೂರು ಅಡಿಯಿಂದ ಅಷ್ಟೆ ಅಂತೆ. ಯುವತಿಗೆ ಸೊಂಟ ಮುರಿದಿದೆ ಅಂತೆ. ಇದು ಅಂತೆ ಕಂತೆಗಳಲ್ಲ. ಒಂಚೂರು ಹೆಚ್ಚು, ಕಡಿಮೆ ಆಗಿದ್ರೆ ಏನ್ ಗತಿ? ಅಲ್ವಾ?  

ಪೂಜೆ ಮಾಡೋಕೆ ಅಂತ ರಾಮನಗರದ ರೇವಣ ಸಿದ್ದೇಶ್ವರ ಬೆಟ್ಟಕ್ಕೆ  ಬಂದಂತ ಪೂಜಾಗೆ ಏನಾಯ್ತೊ ಗೊತ್ತಿಲ್ಲ. ಬೆಟ್ಟ ಹತ್ತಲೋಗಿ ಕಾಲು ಜಾರಿ ಪಾತಾಳಕ್ಕೆ ಬಿದ್ದಿದ್ದಾಳೆ. ನೋಡ್ರಿ ಅವಳ ಗುಂಡಿಗೆಯನ್ನು ಮೆಚ್ಚಲೆಬೇಕು.  ಯಾಕಂದ್ರೆ ಅವಳ ಎದೆ ಇನ್ನು ಢವ, ಢವ , ಅಂತಿತ್ತು. ಆಗಲೇ ಕಿರುಚಿಕೊಂಡಾಗ  ಗೊತ್ತಾಗಿದ್ದು  ಗಾಯಗೊಂಡ ಯುವತಿ ಬಗ್ಗೆ.  ಮೂಲತಃ ಉತ್ತರಪ್ರದೇಶ ಮೂಲದವರು. ದೇವರ ದರ್ಶನಕ್ಕಾಗಿ ಬಂದಿದ್ದ ಕುಟುಂಬವದು. ಸುಮಾರು 400 ಅಡಿ ಎತ್ತರದಿಂದ  ಬಿದ್ದರೂ ಸಹ ಆಶ್ಚರ್ಯ ರೀತಿಯಲ್ಲಿ ಬದುಕಿ ಉಳಿದಿದ್ದಾಳೆ. ಪೂಜಾ ನೆರವಿಗೆ ಕಾರಣ ಹೂವಿನ ಕಸದ ರಾಶಿಯ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾಳೆ. ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ,  ಹೆಚ್ಚಿನ  ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಂಬಂದ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನಡುರಸ್ತೆಯಲ್ಲಿ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕ... ಕಾರಣ ಗೊತ್ತಾ?