Publish Date: Sun, 29 Jul 2018 (11:45 IST)
Updated Date: Sun, 29 Jul 2018 (11:48 IST)
ಹೈದರಾಬಾದ್ : ಟಾಲಿವುಡ್ನ ಖ್ಯಾತ ಗಾಯಕ ರಾಹುಲ್ ಅವರನ್ನು ಡ್ರಿಂಕ್ ಆಯಂಡ್ ಡ್ರೈವ್ ಆರೋಪದ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ರಾಹುಲ್, ಶುಕ್ರವಾರ ರಾತ್ರಿ ಪಾರ್ಟಿಯೊಂದು ಮುಗಿಸಿಕೊಂಡು ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಇಲ್ಲಿಯ ಜೂಬ್ಲಿ ಹಿಲ್ಸ್ ಬಳಿ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಅಲ್ಕೋಬ್ರೀತ್ ಅನಾಲೈಸರ್ ಸಾಧನದ ಮೂಲಕ ತಪಾಸಣೆಗೊಳಪಡಿಸಿದಾಗ ರಾಹುಲ್ ಮದ್ಯಸೇವನೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ತಪಾಸಣೆಯಿಂದ ಅವರ ರಕ್ತದಲ್ಲಿ 175 ಮಿ.ಗ್ರಾಂ ನಷ್ಟು ಆಲ್ಕೋಹಾಲ್ ಕಂಟೆಂಟ್ ಪತ್ತೆಯಾಗಿತ್ತು ಅಲ್ಲದೇ ಲೈಸೆನ್ಸ್ ಇಲ್ಲದೆ ವಾಹನ ಓಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಜೊತೆ ಕಿರುತೆರೆಯ ಆಯಂಕರ್ ರೊಬ್ಬರು ಕೂಡ ಇದ್ದರು ಎಂದು ತಿಳಿದು ಬಂದಿದೆ.
ಇವರು ಇತ್ತೀಚಿಗಷ್ಟೆ ತೆರೆ ಕಂಡಿದ್ದ ರಂಗಸ್ಥಳಂ ಚಿತ್ರದಲ್ಲಿ ಹಾಡಿದ್ದ ಹಾಡು ಎಲ್ಲರ ಮೆಚ್ಚುಗೆ ಪಡೆದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ