Select Your Language

Notifications

webdunia
webdunia
webdunia
webdunia

ನಡುರಸ್ತೆಯಲ್ಲಿ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕ... ಕಾರಣ ಗೊತ್ತಾ?

ಯುವಕ
ಯುವಕನಿಂದ ಮಹಿಳೆಯೊಬ್ಬಳ ಮೇಲೆ  ಮಾರಣಾಂತಿಕ ಹಲ್ಲೆ  ನಡೆದಿದೆ. ಕೌಟುಂಬಿಕ ಕಲಹ  ಹಿನ್ನೆಲೆ ಯುವಕನಿಂದ ಮಹಿಳೆ ಮೇಲೆ  ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಆನೇಕಲ್- ಹೊಸೂರು ಮುಖ್ಯ ರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ನಡೆದಿದೆ.
ಇನ್ನು ಹಲ್ಲೆ ನಡೆಸಿದ ಯುವಕ ನಾಗೇಶ್ ಎಂದು ತಿಳಿದು ಬಂದಿದ್ದು, ಹಲ್ಲೆಗೆ ಒಳಗಾದ ಮಹಿಳೆ ತನ್ನ ಅತ್ತಿಗೆ ರಾಜಮ್ಮ (40) ಎನ್ನಲಾಗಿದೆ.  ಇನ್ನು ಮನೆಯಲ್ಲಿ ನಾಗೇಶ ಮೇಲೆ ಪ್ರತಿನಿತ್ಯ ಜಗಳ‌ ನಡೆಯುತ್ತಿತ್ತು. ಈ ಕಾರಣ ಜಗಳ ವಿಕೋಪಕ್ಕೆ ಹೋಗಿ ತನ್ನ ಅತ್ತಿಗೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.  ಮಹಿಳೆಯ ತಲೆ, ಹೊಟ್ಟೆ ಭಾಗಕ್ಕೆ ಇರಿತದ ಗಾಯಗಳಾಗಿದ್ದು, ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸ್ಥಳಕ್ಕೆ ಆನೇಕಲ್  ಪೋಲಿಸರು ಭೇಟಿ ನೀಡಿ ಆರೋಪಿ ನಾಗೇಶ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಭಾರಿ ಮಳೆಗೆ ಭರ್ತಿಯಾದ ಹಿಡಕಲ್ ಜಲಾಶಯ