Select Your Language

Notifications

webdunia
webdunia
webdunia
webdunia

ದೊರಕದ ಜಾತಿ ಪ್ರಮಾಣ ಪತ್ರ: ರಾಷ್ಟ್ರಪತಿಗೆ ದಯಾಮರಣ ಕೋರಿದ ಅನಾಥ ಯುವಕ!

ದೊರಕದ ಜಾತಿ ಪ್ರಮಾಣ ಪತ್ರ: ರಾಷ್ಟ್ರಪತಿಗೆ ದಯಾಮರಣ ಕೋರಿದ ಅನಾಥ ಯುವಕ!
ಮಂಡ್ಯ , ಗುರುವಾರ, 2 ಆಗಸ್ಟ್ 2018 (16:30 IST)
ಜಾತಿಪ್ರಮಾಣ ಪತ್ರ ಸಿಗದಿದ್ದಕ್ಕೆ ಮನನೊಂದ ಯುವಕನೊಬ್ಬ ದಯಾಮರಣ ಕೋರಿರುವ ಘಟನೆ ನಡೆದಿದೆ.

ಕಳೆದ ಐದು ವರ್ಷಗಳಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದರೂ ಪ್ರಮಾಣ ಪತ್ರ ನೀಡದ ಅಧಿಕಾರಿಗಳ ಕ್ರಮದಿಂದ ನೊಂದ ಯುವಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾನೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಗಂಜಾಂ ಗ್ರಾಮದ ನಿವಾಸಿ ರಘು ಪತ್ರ‌ ಬರೆದ ಯುವಕನಾಗಿದ್ದಾನೆ.

ಕಾರಣ ನೀಡಿ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ರಘು ಬೇಸರಗೊಂಡಿದ್ದಾನೆ, ಉದ್ಯೋಗಕ್ಕೆ ಜಾತಿಪ್ರಮಾಣ ಪತ್ರದ ಅವಶ್ಯಕತೆ ಇದ್ದರೂ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು‌ ಮುಂದಾಗುತ್ತಿಲ್ಲ. ಅನಾಥರಿಗೆ ಜಾತಿ ಪ್ರಮಾಣಪತ್ರ ನೀಡಲು ಅಧಿಕಾರಿಗಳಿಂದ ನಿರಾಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರಮಾಣ ಪತ್ರ ಸಿಗದೇ ಮನನೊಂದ ಯುವಕ ರಘು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ‌‌‌ ಬರೆದಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ಹೈದ್ರಾಬಾದ್ ಕರ್ನಾಟಕದಲ್ಲಿ ಎರಡನೇ ರಾಜಧಾನಿ ಮಾಡಲು ಆಗ್ರಹ