Publish Date: Thu, 02 Aug 2018 (16:17 IST)
Updated Date: Thu, 02 Aug 2018 (16:24 IST)
ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಬೆಳಗಾವಿ ಮಾಡಲು ವಿರೋಧ ವ್ಯಕ್ತವಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿಯೇ ರಾಜ್ಯದ ಎರಡನೇ ರಾಜಧಾನಿಯಾಗಬೇಕು. ಹೀಗಂತ ಆಗ್ರಹಿಸಿ ರಾಯಚೂರಿನ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಅಖಂಡ ಕರ್ನಾಟಕದ ಪರ ಘೋಷಣೆ ಕೂಗಿದರು.
ಹೈ-ಕ ಪ್ರದೇಶದಲ್ಲಿ 371 ಜೆ ಕಲಂ ಸಮರ್ಪಕ ಜಾರಿ ಆಗಬೇಕು ಎಂದು ಧರಣಿ ನಿರತ ಹೈದ್ರಾಬಾದ್ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು ಹಾಗೂ ಜೆಡಿಎಸ್ ಪ್ರಮುಖರು ಹೋರಾಟಕ್ಕೆ ಬೆಂಬಲ ನೀಡಿದರು.