Select Your Language

Notifications

webdunia
webdunia
webdunia
webdunia

ಮೂರು ದಿನಗಳಿಂದ ಠಿಕಾಣಿ ಹೂಡಿದ್ದ ಕಾಳಿಂಗ ಸರ್ಪ ಅರಣ್ಯ ಸೇರಿತು…!

ಮೂರು ದಿನಗಳಿಂದ ಠಿಕಾಣಿ ಹೂಡಿದ್ದ ಕಾಳಿಂಗ ಸರ್ಪ ಅರಣ್ಯ ಸೇರಿತು…!
ಚಿಕ್ಕಮಗಳೂರು , ಶುಕ್ರವಾರ, 3 ಆಗಸ್ಟ್ 2018 (17:51 IST)
ಮೂರು ದಿನಗಳಿಂದ ಎಲ್ಲೂ ಹೋಗದೆ ಒಂದೇ ಜಾಗದಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿರೋ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮರಕೋಡು ಗ್ರಾಮದಲ್ಲಿ ನಡೆದಿದೆ. ಮರಕೋಡುವಿನ ಅರುಣ್ ಎಂಬುವರ ಕಾಫಿ ತೋಟದಲ್ಲಿದ್ದ ಈ ಕಾಳಿಂಗನನ್ನ ಮೂರು ದಿನಗಳ ಹಿಂದೆಯೇ ಕೆಲಸಗಾರರೂ ನೋಡಿದ್ರು. ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತೋಟದಲ್ಲಿ ಹತ್ತಾರು ಹಾವುಗಳನ್ನ ನೋಡಿರ್ತಾರೆ. ಆದ್ರೆ, ಹಾವುಗಳು ಒಂದೇ ಜಾಗದಲ್ಲಿ ಇರೋದಿಲ್ಲ ಎಂದು ಸುಮ್ಮನಾಗಿದ್ರು. ಆದ್ರೆ, ಈ ಕಾಳಿಂಗ ಮೂರು ದಿನಗಳಿಂದ ಒಂದೇ ಜಾಗದಲ್ಲೇ ಓಡಾಡಿಕೊಂಡು ಇದ್ದಿದ್ರಿಂದ ಕೂಲಿ ಕಾರ್ಮಿಕರು ತೋಟದ ಮಾಲೀಕನಿಗೆ ವಿಷಯ ಮುಟ್ಟಿಸಿದ್ದಾರೆ. ತೋಟದ ಮಾಲೀಕ ಅರುಣ್ ಶೃಂಗೇರಿಯ ಉರಗತಜ್ಞ ಅರ್ಜುನ್‍ರನ್ನ ಸ್ಥಳಕ್ಕೆ ಕರೆಸಿ ಈ ಬೃಹತ್ ಕಾಳಿಂಗನನ್ನ ಸೆರೆ ಹಿಡಿಸಿದ್ದಾರೆ.

ದೈತ್ಯಾಕಾರದ ಕಾಳಿಂಗನನ್ನ ಹಿಡಿದ್ದನ್ನು ಕಂಡ ಸ್ಥಳೀಯರು ಹಾಗೂ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಹಾವನ್ನ ಸೆರೆ ಹಿಡಿದ ಅರ್ಜುನ್ ಕೆರೆಕಟ್ಟೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಅರಣ್ಯ ಬಿಡುವ ಮುನ್ನ ನದಿ ದಡದಲ್ಲಿ ಕಾಳಿಂಗನನ್ನ ಸ್ವಲ್ಪ ಆಟವಾಡಿಸಿದ್ದಾರೆ. ಈ ವೇಳೆ ನೋಡೋದಕ್ಕೆ ಭಯವಾಗುವಂತಹ ಬೃಹತ್ ಕಾಳಿಂಗ ಹೆಡೆ ಎತ್ತಿದಾಗ ಅರ್ಜುನ್ ಅದರ ತಲೆ ಸವರಿರೋದನ್ನು ಕಂಡ ಸ್ಥಳೀಯರು ಅರ್ಜುನ್ ಧೈರ್ಯಕ್ಕೆ ಶಹಬ್ಬಾಸ್ ಅಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಶಾಸಕನಿಂದ ಜಾತಿವಾರು ಗ್ರಾಮ ವಾಸ್ತವ್ಯ…!