Select Your Language

Notifications

webdunia
webdunia
webdunia
webdunia

ತಮ್ಮ ಅಭಿಮಾನಿಯ ಮದುವೆಗೆ ಮಹೇಶ್ ಬಾಬು ನೀಡಿದ ಸರ್ಪ್ರೈಸ್ ಉಡುಗೊರೆ ಏನು ಗೊತ್ತಾ?

ತಮ್ಮ ಅಭಿಮಾನಿಯ ಮದುವೆಗೆ ಮಹೇಶ್ ಬಾಬು ನೀಡಿದ ಸರ್ಪ್ರೈಸ್ ಉಡುಗೊರೆ ಏನು ಗೊತ್ತಾ?
ಹೈದರಾಬಾದ್ , ಮಂಗಳವಾರ, 8 ಮೇ 2018 (07:16 IST)
ಹೈದರಾಬಾದ್ : ಯಾವಾಗಲೂ ಅಭಿಮಾನಿಗಳ ಸುಖ ದುಖಃಕ್ಕೆ ಸ್ಪಂದಿಸುವ ಟಾಲಿವುಡ್ ನಟ ಮಹೇಶ್ ಬಾಬು ಅವರು ಇದೀಗ ತಮ್ಮ ಅಭಿಮಾನಿಯೊಬ್ಬರ ಮದುವೆಗೆ ಸರ್ಪ್ರೈಸ್ ಉಡುಗೊರೆಯೊಂದನ್ನು ನೀಡಿ ಆಕೆಯನ್ನು ಖುಷಿಪಡಿಸಿದ್ದಾರೆ.

 ಹೌದು. ಸುಲೇಖ ಎಂಬುವವರು ಇತ್ತೀಚೆಗೆ ಹೈದರಾಬಾದ್‍ನಲ್ಲಿ ಮದುವೆಯಾಗಿದ್ದರು. ಫ್ರಿನ್ಸ್ ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿಯಾಗಿದ್ದ ಸುಲೇಖ ಅವರ ಮದುವೆಯ ಆಹ್ವಾನ ಪತ್ರಿಕೆಯನ್ನು ಅವರ ಸಂಬಂಧಿಕರು ಮಹೇಶ್ ಬಾಬು ಅವರಿಗೆ ಕಳುಹಿಸಿದ್ದರು.

 

ಆಗ ಮಹೇಶ್ ಬಾಬು ಅವರು ಸ್ವತಃ ತಾವೇ  ತಯಾರು ಮಾಡಿದ ಗ್ರೀಟಿಂಗ್ ಕಾರ್ಡ್ ನ್ನು ಉಡುಗೊರೆಯಾಗಿ ಕಳುಹಿಸಿದ್ದು, ಆ ಕಾರ್ಡನ್ನು ಸುಲೇಖಾ ಮದುವೆ ದಿನ ಆಕೆಯ ಸಂಬಂಧಿಕರು ಉಡುಗೊರೆಯಾಗಿ ನೀಡಿದ್ದಾರೆ. ಆ ಕಾರ್ಡ್ ನಲ್ಲಿ ನಟ ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಸಿರೋದ್ಕರ್ ತಮ್ಮ ಆಟೋಗ್ರಾಫ್ ನೀಡಿದ್ದನ್ನು ಕಂಡು ಸುಲೇಖ ತುಂಬಾ ಸಂತೋಷಗೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಗಾಯಕ ಅದ್ನಾನ್ ಸಾಮಿ ಹಾಗೂ ತಂಡದವರಿಗೆ ಹೀಯಾಳಿಸಿದ ಕುವೈಟ್ ವಿಮಾನ ನಿಲ್ದಾಣದ ಅಧಿಕಾರಿಗಳು