ಸೀತೆ ಅರಣ್ಯದಲ್ಲಿದ್ದಾಗ ಮಾಂಸ ಸೇವನೆ ಮಾಡಿದ್ದಾರೆ ಎಂದ ಚಿಂತಕಿ ವಿರುದ್ಧ ದೂರು ದಾಖಲು

ಭಾನುವಾರ, 13 ಜನವರಿ 2019 (10:19 IST)
ಮೈಸೂರು : ಪೆರಿಯಾರ್ ವಾದಿ ಚಿಂತಕಿ ಕಲೈಸೆಲ್ವಿ ರಾಮಾಯಣದ ಸೀತೆಯ ಆಹಾರ ಕ್ರಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಶ್ರೀರಾಮಸೇನೆಯ ಕೋಪಕ್ಕೆ ಗುರಿಯಾಗಿದ್ದಾರೆ.


ಮೈಸೂರಿನಲ್ಲಿ ಶನಿವಾರ ನಡೆದ `ಮೌಢ್ಯ ಸಾಮಾಜಿಕ ಹೋರಾಟಗಳು' ಸಭೆಯಲ್ಲಿ ಮಾತನಾಡಿದ ಕಲೈಸೆಲ್ವಿ,’ ರಾಮಾಯಣದ ಸೀತೆಗೆ ಜಿಂಕೆ ಮಾಂಸ ಎಂದರೆ ತುಂಬಾ ಇಷ್ಟ, ಹಂದಿ, ದನ ಮತ್ತು ಹಾವಿನ ಮಾಂಸ ತಿಂದಿದ್ದಾರೆ ಎಂದು ಹೇಳಿದ್ದಾರೆ.


ಸೀತೆ ಅರಣ್ಯದಲ್ಲಿದ್ದಾಗ ಮಾಂಸ ಸೇವನೆ ಮಾಡಿದ್ದಾರೆ. ದನದ ಮಾಂಸವನ್ನು ತುಪ್ಪದಲ್ಲಿ ಹುರಿದು ತಿನ್ನುತ್ತಿದ್ದರು. ಭಾರತದ ಸಂವಿಧಾನದ ಪ್ರಕಾರ ಹಾಗೂ ಕಾನೂನು ಪ್ರಕಾರ ಸೀತೆ ಇಂದು ಬದುಕಿದ್ದರೆ ಜೈಲಿನಲ್ಲಿರಬೇಕಿತ್ತು. ಅದೇ ನಾವು ಈಗಿನ ಕಾಲದಲ್ಲಿ ಜಿಂಕೆ ಮಾಂಸ ತಿಂದಿದ್ದರೆ ಅರಣ್ಯ ಕಾಯ್ದೆ ಅಡಿ ಬಂಧನವಾಗುತ್ತಿತ್ತು ಎಂದು ಹೇಳಿದ್ದಾರೆ.


ಈ ಹೇಳಿಕೆಯ ವಿರುದ್ಧ ಕಿಡಿಕಾರಿದ ಶ್ರೀರಾಮ ಸೇನೆ ಕಾರ್ಯಕರ್ತರು ಕಲೈಸೆಲ್ವಿ  ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಡವರಿಗಾಗಿ ಎಸ್.ಬಿ.ಐ. ಜಾರಿಗೆ ತಂದಿದೆ ಈ ಹೊಸ ಯೋಜನೆ