Publish Date: Thu, 13 Dec 2018 (09:13 IST)
Updated Date: Thu, 13 Dec 2018 (09:14 IST)
ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದರೆ ಮೃತ್ತಿಕಾ ಪ್ರಸಾದ ಎಂದು ಮಣ್ಣಿನ ರೂಪದಲ್ಲಿ ಕೊಡುತ್ತಾರೆ. ಇದರ ಮಹತ್ವ ನಿಮಗೆ ಗೊತ್ತಾ?
ಮೃತ್ತಿಕಾ ಪ್ರಸಾದ ಧರಿಸುವವರಿಗೆ ನಾಗ ದೋಷ ಭಯವಿರುವುದಿಲ್ಲ, ಹಾಗೇ ಅವರಿಗೆ ನಾಗದೇವರ ಆಶೀರ್ವಾದ ದೊರೆಯುತ್ತದೆ. ಅಂತಹವರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಂಡು ಭಯ ಬೀಳದು.
ಇದಲ್ಲದೆ ಮಾತು ತೊದಲುವವರು ಮೃತ್ತಿಕಾ ಪ್ರಸಾದದ ನೀರನ್ನು ಸೇವಿಸಬಹುದು. ವಿವಾಹ ಸಂಬಂಧಕ್ಕಾಗಿ ವರ/ವಧುವಿನ ಕಡೆಯವರು ಮನೆಗೆ ಬರುವ ದಿನ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿಕೊಂಡು ಚಿಟಿಕೆ ಮೃತ್ತಿಕಾ ಪ್ರಸಾದವನ್ನು ಒಂದು ಚಿಟಿಕೆ ಅರಶಿನವನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ದೇವರಿಗೆ ತುಪ್ಪದ ದೀಪ ಹಚ್ಚಿದರೆ ಬೇಗ ಮದುವೆ ನಿಶ್ಚಯವಾಗುತ್ತದೆ.
ಅದೇ ರೀತಿ ಗಂಡ-ಹೆಂಡತಿ ನಿತ್ಯ ಕಲಹವಾಡುವ ಮನೆಯಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಅರಶಿನದ ಬಟ್ಟೆಯಲ್ಲಿ ಮೃತ್ತಿಕೆಯನ್ನು ಕಟ್ಟಿ ಪೂಜಿಸಿ ಸಾಂಬ್ರಾಣಿ ಹೊಗೆ ಹಾಕಿದರೆ ಜಗಳ ನಿವಾರಣೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ