Publish Date: Wed, 12 Dec 2018 (08:53 IST)
Updated Date: Wed, 12 Dec 2018 (08:54 IST)
ಬೆಂಗಳೂರು: ಹಿಂದೂ ಸಂಪ್ರದಾಯ ಪಾಲಿಸುವ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ ಈ ಪೂಜ್ಯನೀಯ ಸಸ್ಯ ನಮ್ಮ ಮನೆಯ ಭವಿಷ್ಯ ಹೇಳುತ್ತದೆ ಎಂದರೆ ನೀವು ನಂಬುತ್ತೀರಾ?
ನಂಬಲೇಬೇಕು. ಅವರವರ ಅನುಕೂಲಕ್ಕೆ ತಕ್ಕಂತೆ ಪಾಟ್ ನಲ್ಲಿಯೋ, ನೆಲದಲ್ಲಿಯೋ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ನೆಟ್ಟಿರುತ್ತಾರೆ. ಕೆಲವೊಮ್ಮೆ ಎಷ್ಟೇ ನೀರು ಎರೆದು ಆರೈಕೆ ಮಾಡಿದರೂ ಇದು ಬಾಡಿದಂತೆ ಇರುತ್ತದೆ. ಇದು ಏನನ್ನು ಸೂಚಿಸುತ್ತದೆ ಗೊತ್ತಾ?
ಮನೆಯಲ್ಲಿರುವ ಯಾವುದಾದರೂ ಸದಸ್ಯರಿಗೆ ಆರೋಗ್ಯ ಸಮಸ್ಯೆ, ಸಾವು-ನೋವಿನ ಸೂಚನೆಯನ್ನು ತುಳಸಿ ಗಿಡ ಈ ರೀತಿ ತೋರಿಸುತ್ತದೆ ಎಂಬುದು ನಂಬಿಕೆ. ತುಳಸಿ ಎಷ್ಟೇ ಆರೈಕೆ ಮಾಡಿದ ಮೇಲೂ ಬಾಡಿದಂತೆ ಇದ್ದರೆ ಆ ಮನೆಯಲ್ಲಿ ಅಹಿತಕರ ಘಟನೆ ನಡೆಯುವುದರ ಸೂಚನೆ ಎನ್ನಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ