ಬೆಂಗಳೂರು: ಹಿಂದೂ ಧರ್ಮದ ಪ್ರಕಾರ ದಂಪತಿ ಸಮೇತ ಪೂಜೆ ಪುನಸ್ಕಾರ ಮಾಡುವಾಗ ಪತಿ ಪತ್ನಿಯ ಯಾವ ಭಾಗದಲ್ಲಿ ಕೂರಬೇಕು ಮತ್ತು ಯಾಕೆ ಎಂದು ಗೊತ್ತಾ?
ಪೂಜೆಗೆ ಕೂರುವಾಗ ಪತ್ನಿ ಪತಿಯ ಎಡಭಾಗದಲ್ಲಿ ಕೂರುವುದು ಸರಿಯಾದ ಕ್ರಮ. ಇದಕ್ಕೆ ಕಾರಣವೂ ಇದೆ.
ಶಿವನ ಮೊದಲ ಪತ್ನಿ ಸತಿ. ಈಕೆ ಸದಾ ಪತಿ ಶಂಕರನ ಬಲಬದಿಯಲ್ಲೇ ಕೂರುವ ಹಕ್ಕು ಹೊಂದಿದ್ದಳಂತೆ. ಆದರೆ ತಂದೆಯ ಯಾಗಕ್ಕೆ ಪತಿಯ ಒಪ್ಪಿಗೆಯಿಲ್ಲದೇ ಹೊರಟಾಗ ಕೋಪಗೊಂಡ ಶಿವ ಆಕೆಗೆ ಇನ್ನು ಮುಂದೆ ನೀನು ನನ್ನ ಬಲಬದಿಯಲ್ಲಿ ಕೂರುವ ಹಕ್ಕು ಕಳೆದುಕೊಂಡೆ ಎಂದು ಶಾಪ ಕೊಟ್ಟನಂತೆ.
ಯಾಗದಲ್ಲಿ ಪತಿ ಶಿವನಿಗಾದ ಅವಮಾನ ತಾಳಲಾರದೆ ಸತಿ ಅಗ್ನಿಪ್ರವೇಶ ಮಾಡಿದಳು. ನಂತರ ಪಾರ್ವತಿಯಾಗಿ ಅವತರಿಸಿ ಮತ್ತೆ ಶಿವನ ಮಡದಿಯಾದಳು. ಆದರೆ ಹಿಂದಿನ ಜನ್ಮದಲ್ಲಿ ಶಿವ ತನಗೆ ನೀಡಿದ ಶಾಪವನ್ನು ನೆನೆದು ಪಾರ್ವತಿ ಶಿವನ ಎಡಬದಿಗೆ ಕುಳಿತಳಂತೆ. ಇದೇ ಕಾರಣಕ್ಕೆ ಜಗತ್ತಿನಲ್ಲಿ ಪತ್ನಿಯಾದವಳು ಪತಿಯ ಎಡಭಾಗದಲ್ಲಿ ಕೂರುವ ಪದ್ಧತಿ ಬಂತು ಎನ್ನುತ್ತದೆ ಪುರಾಣ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ