Publish Date: Mon, 29 Oct 2018 (06:58 IST)
Updated Date: Mon, 29 Oct 2018 (07:00 IST)
ಒಡಿಶಾ : ಯುವಕನೊಬ್ಬ ಹಾವು ತೋರಿಸುವ ನೆಪದಲ್ಲಿ 11 ವರ್ಷದ ಅಪ್ರಾಪ್ತ ಹುಡುಗಿಯನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಕೇಂದ್ರಪಾರಾ ಜಿಲ್ಲೆಯ ಪಟ್ಟಮಂಡೈ ಬ್ಲಾಕ್ ನ ರಾಜ್ ನಗರ್ ಪ್ರದೇಶದಲ್ಲಿ ನಡೆದಿದೆ.
ಸೋಮನಾಥ ನಾಯಕ್ (26 ವರ್ಷ) ಈ ಕೃತ್ಯ ಎಸಗಿದ್ದ ಆರೋಪಿ. ಸಂತ್ರಸ್ತ ಬಾಲಕಿ ಫಿರಿಕಿದಾಂಡಿ ಗ್ರಾಮದಿಂದ ಸಮೀಪದ ಯೂತ್ಸ್ ಕ್ಲಬ್ ನಲ್ಲಿ ಟ್ಯೂಷನ್ ತರಗತಿಗೆಂದು ಬರುತ್ತಿದ್ದಳು. ಆದರೆ ಅಂದು ತರಗತಿ ಕ್ಯಾನ್ಸಲ್ ಆಗಿದ್ದ ಕಾರಣ ಸ್ಥಳದಲ್ಲಿ ಯಾರು ಇರಲಿಲ್ಲ. ಇದನ್ನು ಗಮನಿಸಿದ ಸೋಮನಾಥ ನಾಯಕ್ ಬಾಲಕಿಯನ್ನು ಹಾವು ತೋರಿಸುವ ನೆಪದಲ್ಲಿ ಕ್ಲಬ್ ನ ಹಿಂಬದಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಳಿಕ ಮನೆಗೆ ಬಂದ ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಪೋಷಕರು ರಾಜ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಮತ್ತು ಆರೋಪಿ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.