Select Your Language

Notifications

webdunia
webdunia
webdunia
webdunia

ಬಲವಂತವಾಗಿ ಮತಾಂತರ ಆರೋಪ ಮದನ್ ಬುರಡಿ ವಿರುದ್ಧ ದೂರು

ಬಲವಂತವಾಗಿ ಮತಾಂತರ ಆರೋಪ  ಮದನ್ ಬುರಡಿ ವಿರುದ್ಧ ದೂರು
ಹುಬ್ಬಳ್ಳಿ , ಬುಧವಾರ, 16 ನವೆಂಬರ್ 2022 (17:40 IST)
ಬಲವಂತ ಮತಾಂತರ ಆರೋಪ ಹಿನ್ನೆಲೆ, ಮದನ್ ಬುರಡಿ ವಿರುದ್ಧ ನಿನ್ನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳು ದೂರು ನೀಡಿವೆ. ಆ ದೂರಿಗೆ ಪ್ರತಿದೂರು ನೀಡಲು ಮದನ್ ಬುರಡಿ ಮುಂದಾಗಿದ್ದಾರೆ. ಸಿಕ್ಕಲಗಾರ ಸಮಾಜದವರನ್ನ ಬಲವಂತವಾಗಿ ಮತಾಂತರ ಮಾಡಿದ್ದಾರೆ, ಎಂದು ಮದನ್ ಬುರಡಿ ವಿರುದ್ಧ ದೂರು ನೀಡಿದ್ದರು. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಬುರಡಿ, ಪದೇ ಪದೇ ನನ್ನ ಮೇಲೆ ಈ ರೀತಿ ಆರೋಪ ಬರ್ತಿದೆ ಎಂದು ಪ್ರತಿದೂರು ನೀಡಿದ್ದಾರೆ. ‘ನಾನು ಹಿಂದೂ ಧರ್ಮದವನೇ, ಯಾರನ್ನೂ ಮತಾಂತರ ಮಾಡಿಲ್ಲ. ಮತಾಂತರ ಮಾಡಿದ ಸಾಕ್ಷಿ, ಪುರಾವೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಿ. ನನ್ನ ಬೆಳವಣಿಗೆ ಸಹಿಸದ ನಮ್ಮ ಸಮಾಜದವರಿಂದಲೇ ನನ್ನ ವಿರುದ್ಧ ಷಢ್ಯಂತ್ರ ಮಾಡುತ್ತಿದ್ದಾರೆ. ACP ಕಚೇರಿಗೆ ತೆರಳಿ ಲಿಖಿತ ದೂರು ನೀಡಲಿದ್ದೇನೆ. ಪದೇ ಪದೇ ಪೊಲೀಸ್ ಠಾಣೆಗೆ ಕರೆಸಿ, ನನ್ನ ಮಾನಸಿಕ ಸ್ಥಿತಿಯನ್ನ ಕುಗ್ಗಿಸಲಾಗ್ತಿದೆ. ಒಂದು ವೇಳೆ ನಾನು ಏಸುನನ್ನ ಪೂಜಿಸಿದ್ದೇ ಆದರೆ, ಅದು ನನ್ನ ಸಾಂವಿಧಾನಿಕ ಹಕ್ಕು’ ಎಂದು ಮದನ್ ಬುರಡಿ ತಮ್ಮನ್ನ ಸಮರ್ಥಿಸಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯನೇ ಅರ್ಜಿ ಹಾಕಿಲ್ವಂತೆ-ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ