Select Your Language

Notifications

webdunia
webdunia
webdunia
webdunia

ಮುಧೋಳ ನಗರ ಬಂದ್

ಮುಧೋಳ ನಗರ ಬಂದ್
ಮುಧೋಳ ನಗರ , ಬುಧವಾರ, 16 ನವೆಂಬರ್ 2022 (17:17 IST)
ಕಬ್ಬಿಗೆ ಸೂಕ್ತ ಬೆಲೆ ನಿರ್ಣಯಕ್ಕಾಗಿ ಕರೆದ ಸಂಧಾನ ಸಭೆ ವಿಫಲ ಹಿನ್ನೆಲೆ ಇಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಬಾಗಲಕೋಟೆ ಜಿಲ್ಲೆ ಮುಧೋಳ ನಗರವನ್ನ ಬಂದ್‌ ಮಾಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಈ ಬಂದ್​​​ಗೆ ಕರೆ ನೀಡಿದ್ರು. ಇಂದು ಮುಧೋಳ ನಗರ ಬಂದ್ ಸಂದರ್ಭದಲ್ಲಿ ಅಂಗಡಿ ಮುಂಗಟ್ಟು ವ್ಯಾಪಾರ ವಹಿವಾಟು ಬಂದ್ ಆಗಿದ್ದು, ಸಾರಿಗೆ ಸಂಚಾರದಲ್ಲಿಯೂ ವ್ಯತ್ಯಯವಾಗಿದೆ. ವಾಸ್ತವವಾಗಿ, ನಿನ್ನೆ ಕಬ್ಬಿಗೆ ಸೂಕ್ತ ಬೆಲೆಗಾಗಿ ರೈತರು, ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆದಿತ್ತು. ಸಕ್ಕರೆ ಸಚಿವ ಶಂಕರಪಾಟಿಲ್ ಮುನೇನಕೊಪ್ಪ, ಬಾಗಲಕೋಟೆ ಉಸ್ತುವಾರಿ ಸಚಿವ ಸಿಸಿ ಪಾಟೀಲ್, ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ರೈತರು ಟನ್ ಕಬ್ಬಿಗೆ 2900 ರೂ. ಬೆಲೆ ಕೇಳಿದ್ದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿ 2800 ರೂ. ಮಾತ್ರ ಬೆಲೆ ನಿಗದಿ ಮಾಡುವುದಾಗಿ ಪಟ್ಟು ಹಿಡಿದಿತ್ತು. ಹೀಗಾಗಿ ಸಭೆಯಲ್ಲಿ ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಮಧ್ಯೆ ಸಂಧಾನ ವಿಫಲವಾದ ಹಿನ್ನಲೆಯಲ್ಲಿ ಬಂದ್​​​ಗೆ ಕರೆ ನೀಡಲಾಗಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಮಾರಕಾಸ್ತ್ರದಿಂದ ಇರಿದು ಯು‌ವಕನ ಹತ್ಯೆ