Publish Date: Wed, 16 Nov 2022 (17:00 IST)
Updated Date: Wed, 16 Nov 2022 (17:17 IST)
ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಬೌಲಿಗಲ್ಲಿ ಪ್ರದೇಶದಲ್ಲಿ ನಡೆದಿದೆ. ಮುದಾಸೀರ್ (19) ಎಂಬಾತ ಕೊಲೆಯಾದ ಯುವಕನಾಗಿದ್ದು, ಈತ ಕಲಬುರಗಿ ನಗರದ ರೋಜಾ ಬಡಾವಣೆ ನಿವಾಸಿಯಾಗಿದ್ದಾನೆ ಲವ್ ವಿಚಾರಕ್ಕೆ ಮುದ್ದಸೀರ್ ಕೊಲೆ ಶಂಕೆ ವ್ಯಕ್ತವಾಗಿದೆ. ಬೈಕ್ ಮೇಲೆ ಬಂದಿದ್ದ ಮೂರ್ನಾಲ್ಕು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಪ್ರಕರಣ ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.