Publish Date: Wed, 16 Nov 2022 (17:31 IST)
Updated Date: Wed, 16 Nov 2022 (17:39 IST)
ಟಿಕೆಟ್ ಗೆ ಅರ್ಜಿ ಸಲ್ಲಿಕೆ ವಿಚಾರ ಟಿಕೆಟ್ ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ ಯಾಕೆ? ಇನ್ನಷ್ಟು ದುಡ್ಡು ಬರಲಿ ಅಂತಾನಾ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನೇ ಅರ್ಜಿ ಹಾಕಿಲ್ವಂತೆ. ಕೆಪಿಸಿಸಿ ಅಧ್ಯಕ್ಷರ ಆದೇಶ ಅವರೇ ಪಾಲಿಸ್ತಿಲ್ಲ, ಪಾಪ ಅವರು ಎಲ್ಲೆಲ್ಲೋ ಸುತ್ತಾಡ್ತಾ ಇದ್ದಾರೆ. ಎಲ್ಲಿ ನಿಲ್ತೀನಂತಾ ಅವರಿಗೇ ಗೊತ್ತಿಲ್ಲ. ಎಲ್ಲಿ ನಿಲ್ತೀನಿ ಅಂತಾ ಹೇಳಲಿ, ಕಾರ್ಯಕರ್ತರು ಕಾಯ್ತಿದ್ದಾರೆ. ತನ್ನ ಕ್ಷೇತ್ರದ ಜನರೇ ಒಪ್ತಿಲ್ಲ ಅಂದ್ರೆ ರಾಜಕಾರಣ ಯಾಕೆ ಬೇಕು? ಅಲೆಮಾರಿತನ ಬಿಡಲಿ, ರಾಜಕೀಯಕ್ಕೆ ರಾಜೀನಾಮೆ ನೀಡಲಿ ಎಂದಿದ್ದಾರೆ. ಸಚಿವ ಸ್ಥಾನ ಬೇಡಿಕೆ ಇಟ್ಟಿಲ್ಲ, ಬೇಡ ಅಂತಾನೂ ಹೇಳಿಲ್ಲ. ಪಕ್ಷದ ಹಿರಿಯರ ಆದೇಶ ಪಾಲನೆ ಮಾಡ್ತೀನಿ. ನಾನು ನಿಲ್ಲಿಲ್ಲ ಅಂದ್ರೆ ಕಾಂಗ್ರೆಸ್ಗೆ ಸಂತೋಷ ಆಗುತ್ತೆ. ಅದಕ್ಕೆ ಕಾಂಗ್ರೆಸ್ನವರೇ ನಾನು ನಿಲ್ಲೊಲ್ಲ ಅಂತ ಹುಯಿಲೆಬ್ಬಿಸ್ತಿದ್ದಾರೆ ಅಂತಾ ಈಶ್ವರಪ್ಪ ಕಿಡಿಕಾರಿದ್ದಾರೆ.