ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಂಕಟ ಮುಂದುವರಿದಿದೆ.
 
ಶುಕ್ರವಾರ ಸಂಜೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದು, ಹೈಕಮಾಂಡ್ ನಾಯಕರ ಜೊತೆ ಸಂಪುಟ ಸಂಬಂಧ ಚರ್ಚೆ ನಡೆಸುವ ಸಂಭವ ಇದೆ.
 
 			
 
 			
					
			        							
								
																	ಮೂಲಗಳ ಪ್ರಕಾರ, ಸಿಎಂ ದೆಹಲಿ ಭೇಟಿ ವೇಳೆ ಕ್ಯಾಬಿನೆಟ್ ಸರ್ಜರಿಗೆ ಅನುಮತಿ ಸಿಗುವುದು ಅನುಮಾನ. ಮೇ 3ರಂದು ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಸಂಪುಟ ಪುನಾರಚನೆ ಆಗಬಹುದು ಎಂಬ ಮಾತು ಕೇಳಿಬಂದಿವೆ. 
									
										
								
																	ಶುಕ್ರವಾರ ಸಂಜೆ ದೆಹಲಿಗೆ ತೆರಳುವ ಸಿಎಂ ಬಸವರಾಜ ಬೊಮ್ಮಾಯಿ ಏಪ್ರಿಲ್ 30ರಂದು ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನಾಯಮೂರ್ತಿಗಳ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
									
											
							                     
							
							
			        							
								
																	ಏಪ್ರಿಲ್ 30ರಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಆಯೋಜಿಸಿರುವ ಭೋಜನ ಕೂಟದಲ್ಲೂ ಸಿಎಂ ಭಾಗಿಯಾಗಲಿದ್ದಾರೆ. ಭಾನುವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಸಿಎಂ ವಾಪಸ್ ಆಗಲಿದ್ದಾರೆ